ಅಂಕಲಿ ಗ್ರಾಮ ಪಂಚಾಯತಿಯಿಂದ ಮತದಾನ ಜಾಗೃತಿ ಅಭಿಯಾನ
ಮಾಂಜರಿ 03 : ಮೇ.10 ರಂದು ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಈ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದಲ್ಲಿ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ನಿಟ್ಟಿನಲ್ಲಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಶತ ಮತದಾನ ಹೆಚ್ಚಿಸುವ ಸಲುವಾಗಿ ಸರ್ಕಾರ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದಲ್ಲಿ ಮತದಾನ ಜಾಗೃತಿ ಅಭಿಯಾನದಡಿ ಗ್ರಾಮದ ಬೀದಿ-ಬೀದಿಗಳಲ್ಲಿ ಜಾಗೃತಿ ರಾ್ಯಲಿ ಮುಖಾಂತರ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಹಕ್ಕು ಸಂವಿಧಾನ ನಮಗೆ ನೀಡಿರುವ ಕರ್ತವ್ಯವಾಗಿದ್ದು, ಸದೃಢ ಪ್ರಜಾಪ್ರಭುತ್ವದ ಸ್ಥಾಪನೆಗೆ ಮತ್ತು ಯೋಗ್ಯ ಪ್ರತಿನಿಧಿಗಳ ಆಯ್ಕೆಗೆ ಮತದಾನ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ರಾ್ಯಲಿ ಮುಖಾಂತರ ಜಾಗೃತಿ ಮೂಡಿಸಲಾಯಿತು.
ಈ ಸಮಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವಿನೋದ ಅಸೋದೆ, ಕಾರ್ಯದರ್ಶಿ ಪದ್ಮಣ್ಣಾ ಕುಂಬಾರ, ಎಸ್ಡಿಎ ಸಂತೋಶ ಭಂಡಾರೆ, ಗ್ರಾಮ ಲೆಕ್ಕಾಧಿಕಾರಿ ಸೋಮಶೇಖರ ಗವಿ, ಸೆಕ್ಟರ್ ಆಫೀಸರ್ ಶಂಕರ ಕಾಂಬಳೆ, ಸಿಬ್ಬಂದಿಯವರಾದ ಸಂಜು ಕಮತೆ, ಅನೀಲ ಕಮತೆ, ಜ್ಯೋತಿ ಬುಬನಾಳೆ ಸೇರಿದಂತೆ ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗ್ರಾಮದ ಸರ್ಕಾರಿ ಶಾಲೆಯ ಸಹ ಶಿಕ್ಷಕರಾದ ರಾಜೇಂದ್ರ ಕಾಮತ, ಪಾಂಡುರಂಗ ನಾಯಿಕ, ಸುಧೀರ ಕಾಂಬಳೆ, ಜಾಧವ ಮೆಡಂ, ಸೀಮಾ ಕೋಳಿ, ಲಕ್ಷಣ ಕೋಳಿ, ಅಂಕಲಿ ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಎಲ್ಸಿಆರ್ಪಿ ಸುರೇಖಾ ಮಾನೆ, ಶಮಿನಾಭಾನು ಪಟೇಲ್, ಬಿಸಿಸಖಿ ಭಾರತಿ ಕಂಬಾರ, ರಾಜಶ್ರೀ ಮೇತ್ರೆ, ಖುಸ್ಬು ಸನದಿ, ಅಶ್ವೀನಿ ಬಾಕಳೆ, ಶಿವಾನಂದ ಕೊಂತೆ, ತೆಜಸ್ವೀನಿ ನಾಯಿಕ ಉಪಸ್ಥಿತರಿದ್ದರು.