ಗದಗ

ಎಸ್ ವಿ ಸಂಕನೂರ ಪರ ಮತಯಾಚನೆ

ಎಸ್ ವಿ ಸಂಕನೂರ ಪರ ಮತಯಾಚನೆ


ಲಕ್ಷ್ಮೇಶ್ವರ"  17: ಪಟ್ಟಣದ ರಂಭಾಪುರಿ ಕಲ್ಯಾಣ ಮಂಟದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಶಿರಹಟ್ಟಿ ಮಂಡಳ ವತಿಯಿಂದ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ ವಿ ಸಂಕನೂರ ಅವರ ಪರ ಮತಯಾಚನೆಯ ಕಾರ್ಯಕ್ರಮ ನಡೆಯಿತು ಮತಯಾಚನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ವಿಪರೀತ ಬರಗಾಲ ಆವರಿಸಿದ್ದರೂ ಸಹ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿಲ್ಲ ಅಂತ ಸರಕಾರಕ್ಕೆ ತಕ್ಕ ಪಾಠ ಕಲಿಸಲು ಭಾರತೀಯ ಜನತಾ ಪಕ್ಷದ ಮುಖಂಡರು ಒಂದಾಗಬೇಕು ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್ ವಿ ಸಂಕನೂರ ಅವರಿಗೆ ಎಲ್ಲಾ ಪದವೀಧರ ಶಿಕ್ಷಕರು ತಮ್ಮ ಅಮೂಲ್ಯ ಮತವನ್ನು ನೀಡುವ ಮೂಲಕ ಮೂರನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಎಸ್ ವಿ ಸಂಕನೂರ ಅವರನ್ನು ಆಯ್ಕೆ ಮಾಡಬೇಕು.


ಇದಕ್ಕೆ ಕಾರ್ಯಕರ್ತರು ಸಹ ಪದವೀಧರರ ಮೇಲೆ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಅವರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿ ಎಸ್ ವಿ ಸಂಕನೂರ ಅವರಿಗೆ ಮೂರನೇ ಬಾರಿ ಗೆಲುವಿನ ಜಯಭೇರಿ ಬಾರಿಸಲು ಮುಂದಾಗಬೇಕು ಎಂದು ಕರೆ ನೀಡಿದರು ಶಾಸಕ ಡಾ ಚಂದ್ರು ಲಮಾಣಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಅವರು ಮಾತನಾಡಿ ಎಸ್ ವಿ ಸಂಕನೂರ ಅವರು ಎಲ್ಲ ಪದವೀಧರರ ಸಮಸ್ಯೆಗಳನ್ನು ಆಲಿಸುವ ಹೃದಯ ವುಳ್ಳವರಾಗಿದ್ದಾರೆ.


ಈಗಾಗಲೇ ಪದವೀಧರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿ ಶಿಕ್ಷಕರ ಮನಸ್ಸನ್ನು ಗೆದ್ದಿದ್ದಾರೆ ಅಂತ ಒಳ್ಳೆಯ ಅಭ್ಯರ್ಥಿಯನ್ನು ಭಾರತೀಯ ಜನತಾ ಪಕ್ಷ ಮೂರನೇ ಬಾರಿಗೆ ಅವಕಾಶ ನೀಡಿದ್ದು ಎಲ್ಲ ಪ್ರಜ್ಞಾವಂತ ಮತ ದಾರರು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಎಸ್ ವಿ ಸಂಕನೂರ ಅವರಿಗೆ ತಮ್ಮ ಅಮೂಲ್ಯ ಮತ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಕರೆ ನೀಡಿದರು ಮುಂಬರುವ ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಗ್ರಾಮ ಪಂಚಾಯಿತಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಹ ನಡೆಯಲಿದ್ದು ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು ಈಗಿ ನಿಂದಲೇ ಪಕ್ಷ ಸಂಘಟನೆಯ ಮೂಲಕ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಲು ಕ್ರಮಿಸಬೇಕು ಎಂದು ಕರೆ ನೀಡಿದರು.


ಈ ಸಮಯದಲ್ಲಿ ಜಿಲ್ಲಾಧ್ಯಕ್ಷರಾದ ರಾಜು ಕುರುಡಗಿ ಲಿಂಗರಾಜ್ ಪಾಟೀಲ್ ಜಯತೀರ್ಥ ಕಟ್ಟಿ ಬೋಜರಾಜ ಕರದಿ ಸುನಿಲ ಮಹಾಂತಶೆಟ್ಟರ ಡಿ ವೈ ಹುನಗುಂದ ಫಕೀರೇಶ್ ರಟ್ಟಿಹಳ್ಳಿ ಚಂಬಣ್ಣ ಬಾಳಿಕಾಯಿ ಸೋಮಣ್ಣ ಡಾಣಗಲ ತಿಮ್ಮರೆಡ್ಡಿ ಮರಡ್ಡಿ ನಾಗರಾಜ್ ಲಕ್ಕುಂಡಿ ಪ್ರವೀಣ್ ಬಾಳಿಕಾಯಿ ವಿಜಯಕುಮಾರ್ ಕುಂಬಾರ ಪ್ರವೀಣ್ ಬೋಮಲೆ ಅಶ್ವಿನಿ ಅಂಕಲಕೋಟೆ ಗಂಗಾಧರ ಮೆಣಸಿನಕಾಯಿ ಸೇರಿದಂತೆ ಪಕ್ಷದ ಅನೇಕ ಹಿರಿಯ ಮುಖಂಡರು ಕಾರ್ಯಕರ್ತರು ಇದ್ದರು ಇದೇ ಸಮಯದಲ್ಲಿ ತಾಲೂಕು ಮಟ್ಟದ ಚದರಂಗ ಆಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರೇಣುಕಾ ಅಮ್ಮನವರ ಎಂಬ ವಿದ್ಯಾರ್ಥಿನಿಯನ್ನು ಸನ್ಮಾನಿಸಲಾಯಿತು 


ಸುದ್ದಿ ಓದಿ