ಶಿಗ್ಗಾವ್

ಸಲೀಂ ಅಹ್ಮದ ಪರವಾಗಿ ಮತಯಾಚನೆ

ಸಲೀಂ ಅಹ್ಮದ ಪರವಾಗಿ ಮತಯಾಚನೆ

ಶಿಗ್ಗಾವಿ 28: ತಾಲೂಕಿನ ಹುಲಗೂರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕ್ಯಾಲಕೊಂಡ, ಬಸನಾಳ, ಹುಲಗೂರ, ಬನ್ನೂರ, ಕಬನೂರ ಕ್ಷೇತ್ರಗಳಲ್ಲಿ ತಾಲೂಕ ಬ್ಲಾಕ ಕಾಂಗ್ರೆಸ ವತಿಯಿಂದ ವಿಧಾನ ಪರಿಷತ ಚುನಾವಣೆ ಅಭ್ಯರ್ಥಿ ಸಲೀಂ ಅಹ್ಮದ ಅವರ ಪರವಾಗಿ ಕಾಂಗ್ರೆಸ ಮುಖಂಡರು ಮತಯಾಚನೆ ಸಭೆಯನ್ನು ಕೈಗೊಂಡರು. 

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಸೋಮಣ್ಣ ಬೇವಿನಮರದ, ಪ್ರಕಾಶ ಹಾದಿಮನಿ, ಪ್ರೇಮಾ ಪಾಟೀಲ, ಶ್ರೀಕಾಂತ ಪೂಜಾರ, ಗುರುನಗೌಡ ಪಾಟೀಲ, ಮಲ್ಲಿಕಾರ್ಜುನಗೌಡ ಪಾಟೀಲ, ಮಜೀದ ಮಾಳಗೀಮನಿ, ವಿ.ವ್ಹಿ.ಪಾಟೀಲ, ಯೂಸುಫಸಾಬ ಭಾವೀಕಟ್ಟಿ, ಸೇರಿದಂತೆ ಕಾರ್ಯಕರ್ತರು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ