ಕಾರವಾರ

ಮಂಗಳೂರು-ಕಾರವಾರ ವೋಲ್ವೋ ಬಸ್ ಕಾರ್ಯಾಚರಣೆ

ಮಂಗಳೂರು-ಕಾರವಾರ ವೋಲ್ವೋ ಬಸ್ ಕಾರ್ಯಾಚರಣೆ

ಕಾರವಾರ  19: ಮಂಗಳೂರಿನಿಂದ ಕಾರವಾರಕ್ಕೆ ವೋಲ್ವೋ ಸಾರಿಗೆ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ಕೆಎಸ್‍ಆರ್‍ಟಿಸಿ ಮಂಗಳೂರು, ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಾರ್ವಜನಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳ ಬೇಡಿಕೆಗನುಗುಣವಾಗಿ ಮಂಗಳೂರು-ಕಾರವಾರ ಮಾರ್ಗದಲ್ಲಿ ವೋಲ್ವೋ ಬಸ್ ಕಾರ್ಯಾಚರಣೆಯ ಪ್ರಾರಂಭಿಸಲಾಗಿರುತ್ತದೆ.  ವೋಲ್ವೋ ಸಾರಿಗೆಯು ಮಂಗಳೂರು ಸ್ಟೇಟ್ ಬ್ಯಾಂಕ್ ನಿಂದ ಹೊರಟು ಉಡುಪಿ, ಕುಂದಾಪುರ, ಭಟ್ಕಳ, ಹೊನ್ನಾವರ, ಕುಮಟ, ಅಂಕೋಲ ಮಾರ್ಗವಾಗಿ ಕಾರವಾರಕ್ಕೆ ಬರಲಿದೆ. 

ಬಸ್ ಮಧ್ಯಾಹ್ನ 4:15 ಮಂಗಳೂರಿನಿಂದ ಹೊರಟು ರಾತ್ರಿ 9:15 ಕಾರವಾರ ತಲುಪುವುದು. ಹಾಗೂ ಬೆಳಗ್ಗೆ 6:45 ಕಾರವಾರ ಹೊರಟ ಬಸ್ 11:45 ಮಂಗಳೂರು ತಲುಪುವುದು ಎಂದು ಅವರು ಹೇಳಿದ್ದಾರೆ.

ಸುದ್ದಿ ಓದಿ