ವಿವೇಕಾನಂದರ ಆದರ್ಶಗಳು ಯುವಜನಾಂಗ ತಲುಪಲಿ: ಪೂಜಾರ
ಬ್ಯಾಡಗಿ 13: ಭಾರತೀಯ ಧಾರ್ಮಿಕ ಪರಂಪರೆಯ ಸಾಕ್ಷಿ ಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನತೆಗೆ ತಲುಪಿಸಿದರೆ ದೇಶಪ್ರೇಮದೊಂದಿಗೆ ರಾಷ್ಟ್ರಪ್ರಜ್ಞೆಯೂ ಬೆಳಗಲಿದೆ ಎಂದು ಕಾರ್ಮಿಕ ಬಂಧು ಮಂಜುನಾಥ ಪೂಜಾರ ತಿಳಿಸಿದರು.
ಪಟ್ಟಣದ ಬನಶಂಕರಿ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಹತ್ತಿರ ನಡೆದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೀರ ಸನ್ಯಾಸಿ ವಿವೇಕಾನಂದರು ವಿಶ್ವದಾದ್ಯಂತ ಸಂಚಾರ ಮಾಡುವ ಮೂಲಕ ಸನಾತನ ಧಾರ್ಮಿಕತೆಯುಳ್ಳ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದರು. ಅದರಲ್ಲೂ ಯುವಜನತೆಯ ಹೃದಯಮಂದಿರದಲ್ಲಿ ಶೌರ್ಯ, ಧೈರ್ಯದ ಪರಿಕಲ್ಪನೆಯನ್ನು ತುಂಬಲು ದೇಶದಾದ್ಯಂತ ಸಂಚರಿಸಿ ಎಲ್ಲರ ಮನೆ ಮಾತಾಗಿರುವ ವಿವೇಕಾನಂದರ ಜೀವನದ ಮಹತ್ವವನ್ನು ಯುವ ಜನರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ ಎಂದರು.
ಬಿಜೆಪಿ ಯುವ ಮುಖಂಡ ಶಿವಯೋಗಿ ಗಡಾದ ಮಾತನಾಡಿದರು.ಯುವ ಮುಖಂಡರಾದ ನಂದೀಶ ವೀರನಗೌಡ್ರ, ಆನಂದ ಪಾಟೀಲ, ಮಹ್ಮದರಫೀಕ ಹಕೀಮ್, ಪೆÇೀಲಿಸ್ ಸಿಬ್ಬಂದಿಗಳಾದ ಜಗದೀಶ ಬ್ಯಾಡಗಿ, ಜಯಪ್ಪಗೌಡ, ಸಾರ್ವಜನಿಕರಾದ ಪ್ರದೀಪ ಪಾಟೀಲ, ಶಿವಕುಮಾರ ಮೋಟೆಬೆನ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.