ರಾಷ್ಟ್ರೀಯ ಭಾವೈಕ್ಯತಾ ಶಿಬಿರಾಥರ್ಿಗಳಿಂದ ಹಂಪಿ ಭೇಟಿ
ಲೋಕದರ್ಶನ ವರದಿ
ಬಳ್ಳಾರಿ 24:ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಅಂಗವಾಗಿ ಶಿಬಿರದ 3ನೇ ದಿನವಾದ ಭಾನುವಾರದಂದು ಶಿಬಿರಾಥರ್ಿಗಳು ವಿಶ್ವಪ್ರಸಿದ್ಧ ಹಂಪಿ ಪ್ರವಾಸ ತಾಣಕ್ಕೆ ಒಂದು ದಿನದ ಪ್ರವಾಸವನ್ನು ಕೈಗೊಂಡು ಎಲ್ಲ ಪ್ರಮುಖ ಸ್ಮಾರಕಗಳನ್ನು ವೀಕ್ಷಿಸಿದರು. ಯುನೆಸ್ಕೋ ಪಟ್ಟಿಯಲ್ಲಿರುವ ವಿಶ್ವಪರಂಪರಾ ತಾಣವಾದ ಹಂಪಿಗೆ ಸರಳಾದೇವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳು, ಇತಿಹಾಸ ವಿಭಾಗದ ಪ್ರಾಧ್ಯಾಪಕರು ಹಾಗೂ ಕನರ್ಾಟಕ, ತಮಿಳುನಾಡು, ಆಂಧ್ರಪ್ರದೇಶ್-ತೆಲಂಗಾಣ, ಕೇರಳ, ಮತ್ತು ಪಾಂಡಿಚೇರಿ ರಾಜ್ಯಗಳ ಶಿಬಿರಾಥರ್ಿಗಳು ಭೇಟಿ ನೀಡಿ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಿಬಿರಾಥರ್ಿಗಳಿಗೆ ವಿಜಯನಗರ ವೈಭವ ಮತ್ತು ಅದರ ಮಹತ್ವದ ಕುರಿತು ಶಿಬಿರಾಥರ್ಿಗಳು ಮಾಹಿತಿಯನ್ನು ಟಿಪ್ಪಣಿ ಮಾಡಿಕೊಂಡ ದೃಶ್ಯ ಕಂಡು ಬಂದಿತು.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿಯಲ್ಲಿ ಪ್ರಖ್ಯಾತಿ ಪಡೆದ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ಪುರಂದರ ಮಂಟಪ, ಕಮಲ ಮಹಲ್, ಉಗ್ರನರಸಿಂಹ, ಸಾಸಿವೆ ಕಾಳು ಗಣಪ, ಕಡಲೆಕಾಳು ಗಣಪ, ಹಾಗೂ ಪ್ರಾಶ್ಚ್ಯವಸ್ತು ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಲಾದ ಪ್ರಾಚೀನ ಕಾಲದ ರಾಜರ ಆಡಳಿತಕ್ಕೆ ಸಂಬಂಧಿಸಿದ ನಾಣ್ಯಗಳು, ಕತ್ತಿ, ಗುರಾಣಿಗಳನ್ನು ವೀಕ್ಷಿಸಿದರು. ನಂತರ ಇನ್ನಿತರ ಸ್ಮಾರಕಗಳಿಗೆ ಭೇಟಿ ನೀಡಿದ ಶಿಬಿರಾಥರ್ಿಗಳು ವಿಜಯನಗರ ಸಾಮ್ರಾಜ್ಯದ ಸಮಗ್ರ ಇತಿಹಾಸದ ಮಾಹಿತಿಯನ್ನು ಟಿಪ್ಪಣಿ ಮಾಡಿಕೊಂಡರು. ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಯಾದ ಜಿನ್ನಿನ ಕೊಟ್ರಪ್ಪ, ಕಾವಲಯ್ಯ ಸಿ. ರಾಮಾಂಜಿನೇಯ, ಮತ್ತು ಉಪನ್ಯಾಸಕರು ಇದ್ದರು