ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ : ಎಂ. ಎನ್. ಮಠದ
ಯರಗಟ್ಟಿ, 19: ವಿಶ್ವಕರ್ಮ ಸಮಾಜವು ಭವ್ಯ ಪರಂಪರೆಯುಳ್ಳ ಸಮಾಜ. ವಾಸ್ತು ಶಿಲ್ಪವನ್ನು ಬಲ್ಲವರು. ಮನೆ, ದೇವಾಲಗಳ ನಿರ್ಮಾಣದಲ್ಲಿ ವಿಶ್ವಕರ್ಮ ಸಮಾಜದ ಕೈಚಳಕವಿದೆ. ಪ್ರತಿಯೊಂದು ಕಲೆಯಲ್ಲೂ ವಿಶ್ವಕರ್ಮ ಸಮಾಜದ ಅವಿಸ್ಮರಣೀಯ ಕೊಡುಗೆಯಿದೆ ಎಂದು ತಹಸೀಲ್ದಾರ ಎಂ. ಎನ್. ಮಠದ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕಿನ ವಿಶ್ವಕರ್ಮ ಕುಲಬಾಂಧವರಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.ಈ ಸಂದರ್ಭದಲ್ಲಿ ಪೂಜ್ಯ ಗಣಪತಿ ಮಹಾರಾಜರು ಸಾನಿಧ್ಯ ವಹಿಸಿದ್ದರು, ಅಧ್ಯಕ್ಷಯನ್ನು ಪ. ಪಂ. ಮುಖ್ಯಾಧಿಕಾರಿ ಡಿ. ಎನ್. ತಹಶೀಲ್ದಾರ, ಪ. ಪಂ. ಇಂಜಿನಿಯರ ಕಾಮಣ್ಣವರ, ಮುರಳಿ ಬಡಿಗೇರ, ರಾಜ್ಯ ಉಪಾಧ್ಯಕ್ಷ ಸಿದ್ದಯ್ಯ ವಡಿಯರ, ಮೌನೇಶ್ವ ಮಾಯಾಚಾರಿ, ಅಶೋಕ ಬಡಿಗೇರ, ಅರ್ಜುನ ಕಮ್ಮಾರ, ಈಶ್ವರ ಬಡಿಗೇರ, ಬಾಲಪ್ಪ ಬಡಿಗೇರ, ಸಂತೋಷ ಕಂಬಾರ, ಸಂತೋಷ ಬಡಿಗೇರ, ದ್ಯಾಮಣ್ಣಾ ಬಡಿಗೇರ, ಉಮೇಶ ಬಡಿಗೇರ, ರಮೇಶ ಬಡಿಗೇರ, ಆನಂದ ಬಡಿಗೇರ, ಶಂಕರ ಬಡಿಗೇರ ಸೇರಿದಂತೆ ಯರಗಟ್ಟಿ-ಸವದತ್ತಿ ತಾಲೂಕಾ ವಿಶ್ವಕರ್ಮ ಸಮಾಜ ಬಾಂಧವರು ಇದ್ದರು.