ವಿರುಪಾಕ್ಷೇಶ್ವರ ದೇವಸ್ಥಾನ: ಸಾಂಸ್ಕೃತಿಕ ಜಾಗರಣೆ
ಲೋಕದರ್ಶನ ವರದಿ
ಹಂಪಿ 06: ಮಹಾಶಿವರಾತ್ರಿಯ ಪ್ರಯುಕ್ತ ಕಡ್ಡಿರಾಂಪುರದ ಶ್ರೀ ಮರಿದೇವ ಸಾಂಸ್ಕೃತಿಕ ಕಲಾವೃಂದದವರು 21ನೇ ವರ್ಷದ ಭಕ್ತಿ ಭಾವನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಹಂಪಿಯ ಶ್ರೀ ವಿದ್ಯಾರಣ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿ ಎಂ.ಹೆಚ್.ಪ್ರಕಾಶ್ರಾವ್ರವರ ಅಧ್ಯಕ್ಷತೆಯಲ್ಲಿ ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ ನೇತೃತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮೋಹನ್ ಚಿಕ್ಭಟ್ ಹೊಸಪೇಟೆಯ ಅಹನಾ ಕೋ-ಆಪರೇಟಿವ್ ಲೀ ಅಧ್ಯಕ್ಷ ಕೆ.ವೀರಭದ್ರಪ್ಪ, ತಾಲೂಕು ಪಂಚಾಯಿತಿ ಸದಸ್ಯ ಶ್ರೀ ಪಾಲಪ್ಪ, ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಜೇಶ್ವರಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಹನುಮಂತಪ್ಪ ಭಾಗವಹಿಸಿದ್ದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ವಿದ್ಯಾರಣ್ಯ ಸ್ವಾಮೀಜಿ ನಾವುಗಳು ದೇವರಲ್ಲಿ ಹಣ ಸಂಪಾದನೆಯ ಮಾರ್ಗವನ್ನು ತೋರಿಸಲು ಪ್ರಾಥರ್ಿಸಬೇಡಿರಿ. ನಮಗೆ ಶಾಂತಿ ಸಮಾದಾನ ಸಹನೆ ಸಹಬಾಳ್ವೆ ಸಮಾಜ ಮುಖಿ ಕೆಲಸ ಮಾಡುವ ಸದ್ಬುದ್ದಿಗಾಗಿ ನೆಮ್ಮದಿಯ ಜೀವನಕ್ಕಾಗಿ ಪ್ರಾಥರ್ಿಸಿರಿ ಎಂದರು
ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳು, ದಾಸರ ಪದಗಳು, ಸಮೋಹ ನೃತ್ಯ, ತತ್ವಪದಗಳು, ಜಾನಪದ ನೃತ್ಯ, ಜಾನಪದ ಗೀತೆಗಳು, ಪಲ್ಲವಿ ಜೋಶಿ, ಸುಗಮ ಸಂಗೀತ ಕಾರ್ಯಕ್ರಮ, ಹಾಗೂ ಇನ್ನು ವಿವಿಧ ಕಲಾವಿದರಿಂದ ಕಾರ್ಯಕ್ರಮಗಳು ಜರುಗಿದವು. ಹಾಮರ್ೊನಿಯಮ್ ಮಹೇಶ್ ತಬಲಾವಾದನ ಯೋಗಿಶ್ ನಡೆಸಿಕೊಟ್ಟವರು ಎ.ದೊಡ್ಡಬಸಪ್ಪ, ಕೆ.ಪಂಪನಗೌಡ ಕಾರ್ಯಕ್ರಮ ನಿರೂಪಣೆ ಮಾಡಿದರು ಕಮಲಾಪುರದ ಕುಶಾಲ್ ಜಿಂಗಾಡೆ ಪೆ.ರಾಘವೇಂದ್ರ ಶೆಟ್ಟಿ, ಮತ್ತು ಪಂಪಾಪತಿ ದಾನಶೆಟ್ಟಿ ಹನವಾಳ್ರವರು ಉಪಸ್ಥಿತರಿದ್ದರು. ಕಾರ್ಯಕ್ರಮವು ರಾತ್ರಿ ಇಡೀ ಅಲ್ಲಿ ನೆರೆದ ಭಾರಿ ಭಕ್ತ ಸಮೋಹ ಮತ್ತು ದೇಶ ವಿದೇಶದ ಪ್ರವಾಸಿಗರಿಗೆ ಸಾಂಸ್ಕೃತಿಕ ಮನೋರಂಜನೆ ನೀಡಿ ಯಶಸ್ವಿಯಾಗಿ ಜರುಗಿತು.