ವಿರಾಟ ಹಿಂದೂ ಮಹಾ ಸಭಾ ಸಮಿತಿ ಶೋಭಾಯಾತ್ರೆ ವಿಷರ್ಜನೆ
ರಾಣೆಬೆನ್ನೂರು 13: ವಾಣಿಜ್ಯ ನಗರವು ವಿಶಾಲವಾಗಿ ಬೆಳೆದ ಮಹಾನಗರ ಇದಾಗಿದೆ. ಪ್ರಥಮ ಬಾರಿಗೆ ವಿರಾಟ ಹಿಂದೂ ಮಹಾಸಭಾ ಸಮಿತಿ, ಅಶೋಕ ವೃತ್ತದಲ್ಲಿ ಮಹಾ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ನಾಗರಾಜ್ ಪವಾರ್ ಹೇಳಿದರು. ಅವರು ಸೋಮವಾರ ಸಭಾಮಂಟಪದಲ್ಲಿ ಆಯೋಜಿಸಲಾಗಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಮಿತಿಯ ಮೂಲಕ ಬರುವ ದಿವಸಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಜನಪರವಾಗಿ ನಡೆಸಲು ಗೆಳೆಯರ ಬಳಗವು ತೀರ್ಮಾನಿಸಿದೆ ಅದರಂತೆ ಇದು ಪ್ರಥಮ ಕಾರ್ಯಕ್ರಮ ಇದಾಗಿದೆ ಎಂದರು.
ಆಗಸ್ಟ್ 31ರಂದು ವಾದ್ಯ ವೈಭವದೊಂದಿಗೆ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಮಾಡುವುದರ ಮೂಲಕ ವಿಜಂಭಣೆಯಿಂದ ಅತ್ಯಂತ ಭಕ್ತಿ ಭಾವದೊಂದಿಗೆ, ಪ್ರತಿಷ್ಠಾಪಿಸಲಾಗಿತ್ತು. ನಿತ್ಯವೂ ನಾಡಿನ ಖ್ಯಾತ ಕಲಾವಿದರು, ಸ್ಥಳೀಯ ಶಾಲಾ-ಕಾಲೇಜುಗಳ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿದೆ ಎಂದರು. ಸೆಪ್ಟೆಂಬರ್ 12 ರಂದು ಸಾರ್ವಜನಿಕವಾಗಿ ಮಹಾದಾಸೋಹ ನಡೆಸಲಾಗಿದ್ದು, ದಾಸೋಹದಲ್ಲಿ 15 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ಪ್ರಸಾದ ಸೇವಿಸಿದ್ದು ಸಮಿತಿಗೆ ಅತ್ಯಂತ ಸಂತೋಷ ತಂದಿದೆ ಎಂದರು. ಸೆಪ್ಟೆಂಬರ್ 14ರಂದು ವಿಘ್ನೇಶ್ವರನ ವಿಸರ್ಜನಾ ಕಾರ್ಯಕ್ರಮ ನೆರವೇರಿಸಲು ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಅಂದು ಮುಂಜಾನೆ 10-30 ಕ್ಕೆ ಉತ್ಸವ ಮೂರ್ತಿಯ ಮೆರವಣಿಗೆಯು 25 ಕ್ಕೂ ಹೆಚ್ಚು ವಿವಿಧ ವಾದ್ಯಮೇಳಗಳೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ಹೊರಟು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರಾತ್ರಿ 9:00 ಗಂಟೆಗೆ ನಗರ ಹೊರವಲಯ, ಆರ್ ಟಿ ಇ ಎಸ್ ಕಾಲೇಜು ಬಳಿ ಮೆರವಣಿಗೆ ಮುಕ್ತಾಯ ಕಾಣುವುದು ನಂತರ ಹರಿಹರದ ತುಂಗಭದ್ರಾ ನದಿಯಲ್ಲಿ ಭಾವೈಕ್ಯತೆಯೊಂದಿಗೆ ವಿಸರ್ಜಿಸಲಾಗುವುದು ಎಂದರು.
ಸಮಿತಿಗೆ ವಿಧಾನಸಭಾ ಕ್ಷೇತ್ರದ ಶಾಸಕರು ಆಯಾ ಸಂದರ್ಭದಲ್ಲಿ ಯಾರೇ ಇರಲಿ, ಆವರು ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುವರು. ಸಮಿತಿಯಲ್ಲಿ ಯಾವುದೇ ಜಾತಿ ಮತ ಬೇಧ ಭಾವ ಮತ್ತು ಪಕ್ಷ ತಾರತಮ್ಯವಿಲ್ಲದೆ ನೂರಾರು ಕಾರ್ಯಕರ್ತರು ಇದ್ದಾರೆ. ಎಂದು ವಿವರಿಸಿದ ಮಣಿ ಪವಾರ್ 14ರಂದು ಮೆರವಣಿಗೆ ರಸ್ತೆಯುದ್ದಕ್ಕೂ ಅನ್ನಪ್ರಸಾದ, ಕುಡಿಯುವ ನೀರು, ಬಾಳೆಹಣ್ಣು ಸೇರಿದಂತೆ ಮತ್ತಿತರ ಉಪಹಾರ ವಸ್ತುಗಳನ್ನು ಭಕ್ತರು ಅವರ ಇಚ್ಛಾನುಸಾರ ರಸ್ತೆಯುದ್ದಕ್ಕೂ ಸಮರ್ಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪರಮೇಶಪ್ಪ ಗೋಳಣ್ಣನವರ. ರಾಯಣ್ಣ ಮಾಕನೂರು, ರಾಮಣ್ಣ ಕಾಕಿ, ಅನಿಲ್ ಸಿದ್ದಾಳಿ, ಶಿವಪುತ್ರ್ಪ ದೇಸಾಯಿ, ಅಮೋಘ ಬದಾಮಿ, ಬಸವರಾಜ ಚಳಗೇರಿ, ರವಿ ಹಿರೇಬಿದರಿ, ನಿತ್ಯಾನಂದ ಕುಂದಾಪುರ, ಮುತ್ತು ಕಾಕೋಳ, ನಾಗರಾಜ ಗೌಳಿ, ಜಗದೀಶ್ ಎಲಿಗಾರ್,ಎನ್.ದೇವರಾಜ್ ಪ್ರಕಾಶ್ ಪೂಜಾರ್, ಮೈಲಪ್ಪ ಗೋಣಿ ಬಸಮ್ನನವರ, ಪ್ರಶಾಂತ, ಸೇರಿದಂತೆ ಅನೇಕ ಗಣ್ಯರು, ಮುಖಂಡರು ಸದಸ್ಯರು ಉಪಸ್ಥಿತರಿದ್ದರು