ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದಲ್ಲಿ ನೂಲ ಹುಣ್ಣಿಮೆ ಅಂಗವಾಗಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸಂಭ್ರಮ ಸಡಗರದಿಂದ ಜರುಗಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಲ ವಾದ್ಯ ವೈಭವಗಳೊಂದಿಗೆ, ಪುರವಂತರ ವೀರಾವೇಶದ ಒಡಪುಗಳಿಂದ, ವಿವಿಧ ಜಾನಪದ ಮಜಲುಗಳಿಂದ, ಗಜರಾಜನ ಗಂಭೀರ ನಡಿಗೆಯಿಂದ ಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಐದು ದಿನಗಳ ಕಾಲ ಶ್ರೀ ವೀರಭದ್ರೇಶ್ವರ ದೇವರಿಗೆ ವಿಶೇಷ ಅಲಂಕಾರ ಪೂಜೆ ಕೈಗೊಳ್ಳಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಭಕ್ತರು ಇದ್ದರು.