ಶಿಗ್ಗಾವ್

ದಲಿತ ಯುವಕನ ಮೇಲೆ ದೌರ್ಜನ್ಯ: ಪಿಎಸ್‌ಐ ಮೇಲೆ ಕಾನೂನು ಕ್ರಮ್ಕೆ ಮನವಿ

ದಲಿತ ಯುವಕನ ಮೇಲೆ ದೌರ್ಜನ್ಯ: ಪಿಎಸ್‌ಐ ಮೇಲೆ ಕಾನೂನು ಕ್ರಮ್ಕೆ ಮನವಿ

ಶಿಗ್ಗಾವಿ 25: ಚಿಕ್ಕಮಂಗಳೂರ ಜಿಲ್ಲೆಯ ಮೂಡಗೇರಿ ತಾಲೂಕಿನ ಕಿರುಗುಂದ ಗ್ರಾಮದಲ್ಲಿ 22 ವರ್ಷದ ದಲಿತ ಯುವಕನ ಮೇಲೆ ಅಲ್ಲಿನ ಪಿಎಸ್‌ಐ ಸಾಕಷ್ಟು ಹಲ್ಲೆ ಮಾಡಿ ದೌರ್ಜನ್ಯವೆಸಗಿ ಅವನಿಗೆ ಮೂತ್ರ ಕುಡಿಸಿ ಹೇಯ ಕೃತ್ಯ ಮಾಡಿದ ಪಿಎಸ್‌ಐ ಅರ್ಜುನ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮಾನವ ಹಕ್ಕುಗಳ ಆಯೋಗದ ರಾಜ್ಯ ಉಪಾಧ್ಯಕ್ಷ ಹನುಮಂತ ಬಂಡಿವಡ್ಡರ ಗೃಹ ಸಚಿವರಲ್ಲಿ ಮನವಿ ಮಾಡಿದರು. 

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಲಿತ ಯುವಕನ ಬಾಯಿಯಲ್ಲಿ ಮೂತ್ರ ಮಾಡಿಸಿ ನೆಲದಲ್ಲಿ ಬಿದ್ದ ಮೂತ್ರವನ್ನು ಕುಡಿಯಲು ಹಚ್ಚಿದ ಪಿಎಸ್‌ಐ ಅರ್ಜುನ ಕೃತ್ಯ ನಾಡಿನ ಜನತೆ ಖಂಡಿಸುತ್ತಿದ್ದಾರೆ, ಕೂಡಲೇ ಅವರನ್ನು ಅಮಾನತ್ತು ಮಾಡಬೇಕು, ಈಗಾಗಲೇ ಅವರ ಮೇಲೆ ಕೇಸು ದಾಖಲಿಸಲಾಗಿದೆ, ಅವರನ್ನು ಕೂಡಲೇ ಬಂಧಿಸಬೇಕು, ಈ ರೀತಿಯ ಪ್ರಕರಣಗಳು ಲಾಕ್ ಡೌನ್ ಸಂದರ್ಭದಲ್ಲಿ ಜರೂಗುತ್ತಿದ್ದು ಅವನ್ನು ಮುಚ್ಚಿಹಾಕದೇ ತಪ್ಪಿತಸ್ಥರ ಮೇಲೆ ಕ್ರಮ ಜರೂಗಿಸಬೇಕು, ಸಾಮಾನ್ಯ ಜನತಗೆ ನ್ಯಾಯ ಒದಗಿಸಬೇಕು, ಅಮಾಯಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದರು. 


ಸುದ್ದಿ ಓದಿ