ಜನರ ಸಮಸ್ಯೆ ಪರಿಹಾರಕ್ಕೆ ಗ್ರಾಮ ವಾಸ್ತವ್ಯ: ಅನ್ನಪೂರ್ಣಾ
ಶಿಗ್ಗಾವಿ17: ಗ್ರಾಮದ ಎಲ್ಲಾ ಪೋತಿ ಪ್ರಕರಣಗಳ ವಿಲೇವಾರಿ, ಜಮೀನು ದಾಖಲಾತಿಗಳ ತಿದ್ದುಪಡಿ, ಲೈಂಗಿಕ ಅಲ್ಪಸಂಖ್ಯಾತರು, ಹಿರಿಯ ನಾಗರೀಕರಿಗೆ ಮಾಸಾಶನ, ಮನಸನಿ ಯೋಜನೆಯ ಸಂಬಂಧಿಸಿದ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಪರಿಹಸರಿಸುವ ನಿಟ್ಟಿನಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಸವಣೂರು ಕಂದಾಯ ಉಪವಿಭಾಗಾಧಿಕಾರಿ ಅನ್ನಪೂರ್ಣಾ ಮುದಕಮ್ಮನವರ ಹೇಳಿದರು.
ತಾಲೂಕಿನ ನಾರಾಯಣಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುನವಳ್ಳಿ ಗ್ರಾಮದಲ್ಲಿ ಅಧಿಕಾರಿಗಳ ಜನಸ್ಫಂದನ ಸಭೆ ನಡೆಸಲು ಪೂರ್ವ ಸಿದ್ಧತೆಗಾಗಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ತಹಶೀಲ್ದಾರ ಮಂಜುನಾಥ ಮನೊಳಿ ಮಾತನಾಡಿ, ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಎನ್ನುವ ಧ್ಯೇಯದೊಂದಿಗೆ ಸರ್ಕಾರ ಜನಸಮಸ್ಯೆಗೆ ಪರಿಹಾರ ಕಾರ್ಯಕ್ಕೆ ಮುಂದಾಗಿದ್ದು ಅರ್ಜಿ ನೀಡಿ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳಬಹುದು. ವ್ಯಾಪ್ತಿಯಲ್ಲಿ ಗ್ರಾಮದ ಅಗತ್ಯ ಯೋಜನೆಗಳನ್ನು ಜಾರಿಗೆ ಬೇಡಿಕೆಗಳನ್ನು ಸಲ್ಲಿಸಲು ಅವಕಾಶಗಳಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದು ಸಮಸ್ಯೆಗಳನ್ನು ಪರಿಹರಿಸಿ ಸೌಲಭ್ಯತೆ ನೀಡಲಾಗುವುದು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಈ ಹಿಂದೆ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ವಾಸ್ತವ್ಯದ ನಂತರ ಅಗತ್ಯ ಬೇಡಿಕೆಗಳು ಈಡೇರಿಲ್ಲ ಎನ್ನುವ ಬಗ್ಗೆ ದೂರುಗಳು ಬಂದಿವೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಜನರನ್ನು ತಲುಪಿಲ್ಲಾ ಎನ್ನುವ ಆರೋಪಗಳು ಜನರಿಂದ ವ್ಯಕ್ತವಾಗುತ್ತಿದೆ. ಕಂದಾಯ ಇಲಾಖೆಯ ಹಲವಾರು ಸಮಸ್ಯೆಗಳು ಪರಿಹರಿಸಲು ಸಾಧ್ಯವಾಗಿಲ್ಲ. ಹೆಚ್ಚಿನ ಜವಾಬ್ದಾರಿ ಕಂದಾಯ ಇಲಾಖೆಯದ್ದು. ಬಡವರ ಪರವಾಗಿ, ರೈತರ ಪರವಾಗಿ ಆಕ್ಷೇಪಣೆಯನ್ನು ಪಡೆದು ಪರಿಹರಿಸಿ ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಲೋಕೋಪಯೋಗಿ ಅಧಿಕಾರಿಗಳು, ಪಿಆರ್.ಇ.ಡಿ. ಸಿಡಿಪಿಓ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಶು ಆಸ್ಫತ್ರೆಯ ಸಹಾಯಕ ಅಧಿಕಾರಿ ಶ್ರೀಶೈಲ್ ಬಾಬಣ್ಣವರ. ನಾರಾಯಣಪೂರ ಗ್ರಾಪಂ ಅಧ್ಯಕ್ಷರು. ಹಾಗೂ ಸದಸ್ಯರು.ಪಿಡಿಓ ಗ್ರಾಮಸ್ಥರು ಅಲ್ಲದೇ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.