ಶಿಗ್ಗಾವ್

ಗ್ರಾಮದ ಅಭಿವೃದ್ದಿಯೇ ಪ್ರಥಮ ಆದ್ಯತೆ: ಪಾಟೀಲ

ಗ್ರಾಮದ ಅಭಿವೃದ್ದಿಯೇ ಪ್ರಥಮ ಆದ್ಯತೆ: ಪಾಟೀಲ

ಶಿಗ್ಗಾವಿ 1:  ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿ  ಗ್ರಾಮ ಪಂಚಾಯತಿ ಚುನಾವಣೆ ದಿನವೇ ನನ್ನ ಗೆಲುವು ಶತಸಿದ್ದ ಎಂದು ಹೇಳಿದ್ದ ಬಿ.ಸಿ.ಪಾಟೀಲ ಇಂದು ವಿಜಯ ಶಾಲಿಯಾಗಿ ಗ್ರಾಮದ ಅಭಿವೃದ್ದಿಯೇ ನನ್ನ ಪ್ರಥಮ ಆದ್ಯತೆ ಎಂದರು.

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಮೊದಲಿನಿಂದ ಜನ ಸೇವೆಯನ್ನು ಮಾಡಬೇಕು ಎಂದು ಆಸೆಯಿತ್ತು ಅದು ಇಂದು ಸಾಕಾರವಾಗಿದೆ ಮೊದಲಿನಿಂದ ಸಮಾಜಸೇವೆಯನ್ನು ಮಾಡುತ್ತಾ ಬಂದಿದ್ದೆ ಅದರ ಪ್ರತಿಫಲವಾಗಿ ನನಗೆ ಚುನಾವಣೆಯಲ್ಲಿ ಜಯಶಾಲಿಯಾಗಲು ಕಾರಣಿಕರ್ತರಾದ ಚಾಕಾಪೂರ ಗ್ರಾಮದ ಎಲ್ಲ ಗುರು ಹಿರಿಯರಿಗೂ ಹಾಗೂ ನನ್ನ ಕಾಂಗ್ರೆಸ ಮುಖಂಡರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಸುದ್ದಿ ಓದಿ