ಗೋಕಾಕ್

ತೋಟದ ಜಮೀನಿನಲ್ಲಿ ನೇರವೇರಿದ ಡಿ.ಎಮ್‌. ದಳವಾಯಿಯವರ ಪುತ್ರನ ಅಂತ್ಯ ಸಂಸ್ಕಾರ

ತೋಟದ ಜಮೀನಿನಲ್ಲಿ ನೇರವೇರಿದ ಡಿ.ಎಮ್‌. ದಳವಾಯಿಯವರ ಪುತ್ರನ ಅಂತ್ಯ ಸಂಸ್ಕಾರ

ಘಟಪ್ರಭಾ 30: ಗುರುವಾರ ಮಧ್ಯಾಹ್ನ ಆಕಾಲಿಕ ನಿಧನ ಹೊಂದಿದ ಹಿರಿಯ ಮುಖಂಡರಾದ ಡಿ.ಎಮ್‌. ದಳವಾಯಿಯವರ ಪುತ್ರ ಹಾಗೂ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ವಿಕ್ರಮ ದಳವಾಯಿಯವರ ಅಂತ್ಯ ಸಂಸ್ಕಾರ ಶುಕ್ರವಾರದಂದು 12 ಗಂಟೆಗೆ ಅವರ ತೋಟದ ಜಮೀನಿನಲ್ಲಿ ಜರುಗಿತು. 

ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಿರಿಯ ವಯಸ್ಸಿನಲ್ಲಿ ಸಾವನ್ನಪ್ಪಿದ ಮಗನ ಅಗಲಿಕೆಯ ದು:ಖ ಭರಿಸುವ ಶಕ್ತಿ ಆತನ ತಂದೆ ಹಾಗೂ ಕುಟುಂಬ ವರ್ಗಕ್ಕೆ ಸಿಗಲಿ ಎಂದು ಸಂತಾಪ ಸೂಚಿಸಿದರು. 

ಗುಬ್ಬಲಗುಡ್ಡ ಕೆಂಪಯ್ಯಾ ಸ್ವಾಮಿಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕ ರಮೇಶ ಜಾರಹೊಳಿಯವರ ಆಪ್ತ ಸಹಾಯಕ ಸುರೇಶ ಸನದಿ, ಮಾಜಿ ಎಮ್‌.ಎಲ್‌.ಸಿ ವಿವೇಕರಾವ ಪಾಟೀಲ, ಧುರೀಣರಾದ ಅಶೋಕ ಪುಜಾರಿ. ಜಿ. ಪಂ ಮಾಜಿ ಸದಸ್ಯರಾದ ಮಡೆಪ್ಪ ತೋಳಮರ್ಡಿ, ಟಿ.ಆರ್‌.ಕಾಗಲ್ ಅವರು ದಳವಾಯಿ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. 

ವಿಕ್ರಮ ದಳವಾಯಿ ಅವರ ಅಂತ್ಯ ಸಂಸ್ಕಾರದಲ್ಲಿ ಘಟಪ್ರಭಾ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. 


ಸುದ್ದಿ ಓದಿ