ವಿಕಾಸಕುಮಾರ ಅರಳಿಮಟ್ಟಿ ನಿಧನ
ಬ್ಯಾಡಗಿ 23: ಪಟ್ಟಣದ ಮೆಣಸಿನಕಾಯಿ ವರ್ತಕ ಹಾಗೂ ಪತ್ರಕರ್ತರಾದ ಮಾಲತೇಶ ಅರಳಿಮಟ್ಟಿ ಇವರ ದ್ವಿತೀಯ ಸುಪುತ್ರ ವಿಕಾಸಕುಮಾರ ಅರಳಿಮಟ್ಟಿ (21) ಇವರು ಅನಾರೋಗ್ಯದಿಂದ ದಿ. 23 ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ತಂದೆ,ತಾಯಿ, ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಸಂತಾಪ: ಮೃತರ ನಿಧನಕ್ಕೆ ಸಂಸದ ಶಿವಕುಮಾರ ಉದಾಸಿ, ಶಾಸಕರುಗಳಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರೂ ಓಲೇಕಾರ, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಬಸವರಾಜ ಶಿವಣ್ಣನವರ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಪುರಸಭಾಧ್ಯಕ್ಷೆ ಕವಿತಾ ಸೊಪ್ಪಿನಮಠ, ಮುರಿಗೆಪ್ಪ ಶೆಟ್ಟರ, ಸುರೇಶ ಉದ್ಯೋಗಣ್ಣನವರ, ಶಂಕ್ರಣ್ಣ ಮಾತನವರ, ವಿ.ವಿ. ಹಿರೇಮಠ, ಸುರೇಶ ಯತ್ನಳ್ಳಿ, ಶಿವಬಸಪ್ಪ ಕುಳೇನೂರ, ರಾಮಣ್ಣ ಉಕ್ಕುಂದ, ವಿರೇಂದ್ರ ಶೆಟ್ಟರ, ಬಸವರಾಜ ಛತ್ರದ, ಗಂಗಣ್ಣ ಎಲಿ, ಜಿಲ್ಲಾ ಮತ್ತು ತಾಲೂಕಾ ಪತ್ರಕರ್ತರ ಸಂಘ ಹಾಗೂ ಮೆಣಸಿನಕಾಯಿ ವರ್ತಕರ ಸಂಘದ ಸದಸ್ಯರು ಸೇರಿದಂತೆ ವಿವಿಧ ಗಣ್ಯರು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.