ಗೋಕಾಕ್

ಅರವಟ್ಟಿಗೆ ಕಾರ್ಯ ಸ್ತುತ್ಯಾರ್ಹ: ವಿಜಯೇಂದ್ರ ಪಾಟೀಲ

ಅರವಟ್ಟಿಗೆ ಕಾರ್ಯ ಸ್ತುತ್ಯಾರ್ಹ: ವಿಜಯೇಂದ್ರ ಪಾಟೀಲ

ಗೋಕಾಕ 23: ಜಾನಪದ ರಂಗಭೂಮಿ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರು ಮರಡಿಶಿವಾಪೂರ ರಸ್ತೆಯ ಬದಿಗಿರುವ ತಮ್ಮ ಜಾನಪದ ರಂಗಲೋಕದಲ್ಲಿ ಸುಮಾರು ಎರಡುನೂರು ಸಸಿಗಳನ್ನು ನೆಡುವುದರೊಂದಿಗೆ ಸಾರ್ವಜನಿಕರಿಗಾಗಿ ಅರವಟ್ಟಿಗೆ ನಿರ್ಮಿಸಿದುದು ಸ್ತುತ್ಯಾರ್ಹವೆಂದು ನಾಡಿನ ಹಿರಿಯ ಸಾಹಿತಿ ವಿಜಯೇಂದ್ರ ಪಾಟೀಲರು ಅಭಿಪ್ರಾಯಿಸಿದರು. 

ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಇತ್ತೀಚೆಗೆ ಗೋಕಾಕ ತಾಲ್ಲೂಕ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಾನಪದ ಕಲಾವಿದ ಈಶ್ವರಚಂದ್ರ ಬೆಟಗೇರಿ ನಿರ್ಮಿಸಿದ ಸಾರ್ವಜನಿಕ ಅರವಟ್ಟಿಗೆ (ಕುಡಿಯುವ ನೀರಿನ) ಉದ್ಘಾಟಿಸಿ ಮಾತನಾಡಿದ ಪಾಟೀಲರು, ನಮ್ಮೂರು ಬೆಟಗೇರಿ ಪರಿಸರದಲ್ಲಿ ಬೆಳೆದು ನಾಡಿನ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಕಾರ್ಯಗಳಲ್ಲಿ ತೊಡಗಿರುವ ಈಶ್ವರಚಂದ್ರ ಶ್ರೀಸಾಮಾನ್ಯರಿಗೆ ಉಪಯುಕ್ತವಾಗುವ ಕಾರ್ಯ ಮಾಡುತ್ತಲಿರುವುದು ನಮಗೆ ತುಂಬಾ ಹರ್ಷ ತಂದಿದೆ ಎಂದು ಪಾಟೀಲರು ನುಡಿದರು. 

ಈ ಸಂದರ್ಭದಲ್ಲಿ ಬೆಟಗೇರಿ ಗ್ರಾಮದ ಹಿರಿಯರಾದ ವೇ. ಸಂಗಯ್ಯ ರುದ್ರಯ್ಯ ಹಿರೇಮಠ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಬಾಬಣ್ಣ ಪಣದಿ, ಭೀಮನಾಯ್ಕ ಎಂ. ನಾಯ್ಕ, ಅರ್ಜುನ ಬಸಪ್ಪ ಅಂದಾನಿ, ಪುಂಡಲೀಕಪ್ಪ ಬಸಪ್ಪ ಹುಂಚಾಳ, ಪ್ರಕಾಶ ಈಶ್ವರ​‍್ಪ ಮೆಳ್ಳೆಣ್ಣವರ, ಈರಣ್ಣ ಶಿವಪ್ಪ ನಾವಿ, ವಿಠಲ ಎಂ. ಬಡಿಗೇರ ಮುಂತಾದವರು ಹಾಜರಿದ್ದರು. 


ಸುದ್ದಿ ಓದಿ