ವಿಜಯದಶಮಿ ಆಚರಣೆ
ಯರಗಟ್ಟಿ 25: ಪಟ್ಟಣದಲ್ಲಿ ವಿಜಯದಶಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶ್ರೀ ಮಹಾಂತ ದುರದುಂಡೇಶ್ವರ ಮಠದಿಂದ ಹೊರಟ ಊರಿನ ದೇವತೆಗಳ ಪಲ್ಲಕ್ಕಿಗಳು ಶ್ರೀ ಮರಳುನಾಗದೇವಿ ದೇವಸ್ಥಾನದಲ್ಲಿ ಸಮಾವೇಶಗೊಂಡವು. ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ, ಸೇರಿದ ಸಾವಿರಾರು ಜನರು ಪರಸ್ಪರ ಬನ್ನಿಯನ್ನು ವಿನಿಮಯ ಮಾಡಿಕೊಂಡು ನಾವು ನೀವು ಬೆಳ್ಳಿ ಬಂಗಾರದಂಗ ಇರೋಣ ಎಂದು ಶುಭಾಶಯ ಕೋರಿದರು. ನವರಾತ್ರಿ ಅಂಗವಾಗಿ ಗ್ರಾಮದೇವಿಯರ ದೇವಸ್ಥಾನ, ಲಕ್ಷ್ಮೀದೇವಿ ದೇವಸ್ಥಾನ, ಕಾಳಿಕಾದೇವಿ ದೇವಸ್ಥಾನ, ರಾಜರಾಜೇಶ್ವರಿದೇವಿ ದೇವಸ್ಥಾನದಲ್ಲಿ ಶ್ರೀದೇವಿ ಮಹಾತ್ಮ ಪುರಾಣ ಪ್ರವಚನ, ಕುಂಕುಮಾರ್ಚನ. ಉಡಿತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ಊರಿನ ಬೀದಿಯಲ್ಲಿ ಉತ್ಸಾಹದಿಂದ ಜರುಗಿತು.
ಅಜೀತಕುಮಾರ ದೇಸಾಯಿ, ವಿಶಾಲಗೌಡ ಪಾಟೀಲ, ಮೋಹನ ಹಾದಿಮನಿ, ರಾಜೇಂದ್ರ ವಾಲಿ, ಶ್ರೀಶೈಲ ವಾಲಿ, ಮಹಾಂತೇಶ ಹಿರೇಮಠ, ಸಂಜು ಕಲಾಲ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಇದ್ದರು.