ವಿದ್ಯುತ್ ಅದಾಲತ್ ಕಾರ್ಯಕ್ರಮ
ಇಂಡಿ22: ಕರ್ನಾಟಕ ಸರಕಾರವು ವಿದ್ಯುತ್ ಅದಾಲತ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಆರ್.ಎಸ್. ಮೆಂಡೆಗಾರ ಹೇಳಿದರು.
ಅವರು ಬುಧವಾರ ತಾಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಚ್ಯಾಣ ಶಾಖಾಧಿಕಾರಿ ಆರ್.ಆರ್. ಲಾಳಸಂಗಿ ಮಾತನಾಡಿ, ಗ್ರಾಹಕರು ಎಲ್.ಇ.ಡಿ ಬಲ್ಬಗಳನ್ನು ಬಳಕೆ ಮಾಡಿ ವಿದ್ಯುತ್ ಉಳಿಸಬೇಕು. ಮಳೆ, ಗಾಳಿ, ಸಿಡಿಲು ಬಂದಾಗ ಮನೆಗಳಲ್ಲಿನ ಟಿವಿ, ಪ್ರೀಜ್, ವಾಶಿಂಗ್ ಮಶೀನು ಮುಂತಾದ ವಸ್ತುಗಳನ್ನು ಬಳಕೆ ಮಾಡಬಾರದು ಎಂದರು.
ನೋಡಲ್ ಅಧಿಕಾರಿ ಎಸ್.ಬಿ. ಸಿರಗೂರ, ತಾಪಂ ಮಾಜಿ ಸದಸ್ಯ ಜಗನ್ನಾಥ್ ಕೋಟೆ, ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ ಮಾತನಾಡಿದರು.
ಭೀಮರಾಯಗೌಡ ಬಿರಾದಾರ, ಸುಭಾಸ ಲಾಳಸೇರಿ, ಈರಣ್ಣ ಬಿರಾದಾರ, ಶ್ರೀಶೈಲ ಮಠಪತಿ ಮತ್ತಿತರಿದ್ದರು.
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಆರ್.ಎಸ್. ಮೆಂಡೆಗಾರ ಮಾತನಾಡುತ್ತಿರುವುದು.