ಮುದ್ದೆಬಿಹಾಲ್

ಢವಳಗಿಯಲ್ಲಿ ವಿದ್ಯಾಸ್ಪೂರ್ತಿ ಟಾಲೆಂಟ್ ಅವಾರ್ಡ: ವಿಜೇತರಿಗೆ ಬಹುಮಾನ

ಢವಳಗಿಯಲ್ಲಿ ವಿದ್ಯಾಸ್ಪೂರ್ತಿ ಟಾಲೆಂಟ್ ಅವಾರ್ಡ: ವಿಜೇತರಿಗೆ ಬಹುಮಾನ

ಮುದ್ದೇಬಿಹಾಳ  30: ತಾಲೂಕಿನ ಢವಳಗಿ ಗ್ರಾಮದ ವಿದ್ಯಾಸ್ಪೂರ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಟಾಲೆಂಟ್ ಅವಾರ್ಡ್‌ ಪರೀಕ್ಷೆಯಲ್ಲಿ ವಿಜಯಪುರ, ಹೂವಿನ ಹಿಪ್ಪರಗಿ, ತಾಳಿಕೋಟೆ, ರಾಜನಕೋಳೂರು ಸೇರಿದಂತೆ ವಿವಿಧ ಪ್ರದೇಶಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.ಪರೀಕ್ಷೆಯಲ್ಲಿ ಹೂ. ಹಿಪ್ಪರಗಿಯ ಆದ್ಯ ಶಿವಯೋಗಿ ಪ್ರಥಮ ಬಹುಮಾನವಾಗಿ ?35,000 (?5,000 ನಗದು + ?30,000 ಶಿಷ್ಯವೇತನ) ಪಡೆದರು. ನಿಡಗುಂದಿಯ ಸಮನ್ವಿತ ಸಜ್ಜನ ದ್ವಿತೀಯ ಬಹುಮಾನವಾಗಿ ?28,000 (?3,000 ನಗದು + ?25,000 ಶಿಷ್ಯವೇತನ) ಮತ್ತು ಢವಳಗಿಯ ಸ್ಮಿತಿಕಾ ಬಿರಾದಾರ ತೃತೀಯ ಬಹುಮಾನವಾಗಿ ?22,000 (?2,000 ನಗದು + ?20,000 ಶಿಷ್ಯವೇತನ) ಪಡೆದರು. ಇನ್ನೂ 10 ವಿದ್ಯಾರ್ಥಿಗಳಿಗೆ ಸಮಾನಾಧಕರ ಬಹುಮಾನ ವಿತರಿಸಲಾಯಿತು.

ವಿಜೇತರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಮಾಜ ಸೇವಕ ಶಾಂತಗೌಡ ಪಾಟೀಲ, ಶಿಕ್ಷಣದ ಮಹತ್ವವನ್ನು ಉಲ್ಲೇಖಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಬೆಂಬಲ ಅಗತ್ಯವಿದೆ ಎಂದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ ಅವರು ಕೂಡ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು.ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಸಿದರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಭಯ ನಿವಾರಣೆಗೆ ಈ ಪರೀಕ್ಷೆ ನೆರವಾಗುತ್ತದೆ ಎಂದರು. ಅಧ್ಯಕ್ಷೆ ಬಸಮ್ಮ ಸಿದರೆಡ್ಡಿ ಸಂಸ್ಥೆಯ ಶೈಕ್ಷಣಿಕ ಸಾಧನೆಗಳನ್ನು ವಿವರಿಸಿದರು.ಉಪಾಧ್ಯಕ್ಷ ರಾಮನಗೌಡ ಸಿದರೆಡ್ಡಿ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗುರುರಾಜ ಕನ್ನೂರ ಹಾಗೂ ಶಿಕ್ಷಕ ವೃಂದ, ಪಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವಾಣಿ ಬಿರಾದಾರ ಸ್ವಾಗತಿಸಿದರು, ಸಾವಿತ್ರಿ ಬಿರಾದಾರ ನಿರೂಪಿಸಿದರು, ಪ್ರಿಯಾಂಕಾ ಮುದ್ದೇಬಿಹಾಳ ವಂದಿಸಿದರು. 


ಸುದ್ದಿ ಓದಿ