ತಾಳಿಕೋಟಿ

ವಿದ್ಯಾಸೇತು ಪುಸ್ತಕ ವಿತರಣೆ

ವಿದ್ಯಾಸೇತು ಪುಸ್ತಕ ವಿತರಣೆ

ತಾಳಿಕೋಟೆ: ರೋಟರಿ ಸಂಸ್ಥೆಯು ಒಂದು ಶತಮಾನದಿಂದ ಸಾಮಜಿಕ ಸೇವೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರು ವಿಶ್ವದ ಸುಮಾರು 140 ದೇಶಗಳಲ್ಲಿ ಸೇವೆಸಲ್ಲಿಸುತ್ತಿದೆ ಎಂದು ರೋಟರಿಯನ್ ಅಶೋಕ ಬಳಗಾನೂರ ತಿಳಿಸಿದರು.

ಎಸ್.ಕೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ವಿದ್ಯಾಸೇತು ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಕಳೆದೆರಡು ವರ್ಷಗಳಿಂದ ಮಕ್ಕಳ ಕಲಿಕೆ ಸುಗಮವಾಗಿ ನಡೆದಿಲ್ಲದ ಕಾರಣ ಶಿಕ್ಷಣ ತಜ್ಣರು ಹಾಗೂ ಅನುಭವಿ ಶಿಕ್ಷಕರ ಬಳಗ ಮಕ್ಕಳ ಕಲಿಕೆಗೆ ವಿದ್ಯಾಸೇತು ಪುಸ್ತಕವನ್ನು ರಚಿಸಿದ್ದಾರೆ, ಮಕ್ಕಳ ಕಲಿಕೆಗೆ ಇದು ಸೇತುವೆಯಾಗಲಿ ಎಂದರು.

ವಿ.ವಿ ಸಂಘದ ನಿರ್ದೇಶಕ ರೋಟೆರಿಯನ್ ಎಂ.ಆರ್.ಕತ್ತಿ ಮಾತನಾಡುತ್ತ ಮಕ್ಕಳು ವಿದ್ಯಾಸೇತು ಸದುಪಯೋಗ ಮಾಡಿಕೊಂಡು ಯಶಸ್ಸು ಸಾಧಿಸಲಿ. ಇಂಗ್ಲಿಷ ,ವಿಜ್ಞಾನ ಹಾಗೂ ಗಣಿತ ವಿಷಯಗಳ ಮಹತ್ವದ ಅಂಶಗಳನ್ನು ಒಳಗೊಂಡಿರುವ ಈ ಹೊತ್ತಿಗೆ ಓದಿ ಹೆಚ್ಚು ವಿದ್ಯಾರ್ಜನೆ ಮಾಡಿಕೊಳ್ಳಿ ಎಂದರು.

ಪುಸ್ತಕಗಳ ಕುರಿತಾಗಿ ಮಾತನಾಡಿದ ಶಿಕ್ಷಕ ಶರಣಗೌಡ ಪಾಟೀಲ ,ವಿದ್ಯಾರ್ಥಿಗಳಿಗೆ ಅತ್ಯುಪಯುಕ್ತವಾದ ಹೊತ್ತಿಗೆ ಇದಾಗಲಿದೆ ಎಂದು ಅಭಿಪ್ರಾಯ ಪಟ್ಟರು. 

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಎಸ್.ಡಿ.ಕರಜಗಿ  ಮಾತನಾಡಿದರು. ವೇದಿಕೆಯಲ್ಲಿ ಪ್ರೌಢಶಾಲೆಯ ಚೇರಮನ್ ಎಂ.ಎಂ.ವಾಲಿ, ವಿವಿ ಸಂಘದ ನಿರ್ದೇಶಕ ರೋಟೆರಿಯನ್ ಎಂ.ಎಸ್.ಸರಶೆಟ್ಟಿ ಇದ್ದರು. ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ರೂಪಾ ಮೇಲಿನಮನಿ,   ಸಾನಿಯಾ ಮುಲ್ಲಾ ಪ್ರಾರ್ಥಿಸಿದರು. ಶಿಕ್ಷಕರಾದ ರಾಮನಗೌಡ ದಾನಿ ಸ್ವಾಗತಿಸಿದರು, ರಾಜು ರಾಠೋಡ ವಂದಿಸಿದರು. ಅನಿಲಕುಮಾರ ಇರಾಜ ನಿರೂಪಿಸಿದರು.

ಸುದ್ದಿ ಓದಿ