ವೇಮನರ ವಚನಗಳು ಸಾರ್ವಕಾಲಿಕ ಸತ್ಯ
ಜಿ.ಪಂ.ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿಕೆ | ಮಹಾಯೋಗಿ ವೇಮನರ ಜಯಂತ್ಯೋತ್ಸವ
ರಾಣಿಬೆನ್ನೂರ 22: ರೆಡ್ಡಿ ಸಮುದಾಯ ಸೇರಿದಂತೆ ಸಮಸ್ತ ಸಮಾಜದ ಸುಧಾರಣೆಗಾಗಿ ತಮ್ಮ ತ್ಯಾಗದ ಬದುಕಿನ ಮೂಲಕ ವೇಮನರು ರಚಿಸಿದ ವಚನಗಳು ಸಮುದಾಯಕ್ಕೆ ಮಾರ್ಗದರ್ಶಿಯಾಗಿದೆ. ಅಂತಹ ಶರಣರ ಬದುಕು ಮತ್ತು ಜೀವನ ಇಂದಿನ ಯುವಕರು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಅವರ ವಿಚಾರಧಾರೆಗಳನ್ನು ಸರ್ವರಿಗೂ ತಿಳಿಸುವ ಕಾರ್ಯ ಮಾಡಲು ಮುಂದಾದಾಗ ಮಾತ್ರ ಸಮಾಜ ಮತ್ತಷ್ಟು ಸುಧಾರಣೆಯಾಗಲು ಸಾಧ್ಯವಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿದರು.
ನಗರದ ಪಿ.ಬಿ.ರಸ್ತೆಯ ವೇಮನ ವಿದ್ಯಾರ್ಧಕ ಸಂಘದ ಭವನದಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನರ 609ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈ ದೇಶದಲ್ಲಿ ಜನ್ಮ ತಾಳಿದ ಎಲ್ಲ ಶರಣರು ಆಯಾ ಕಾಲಾನುಘಟ್ಟದಲ್ಲಿ ಅನೇಕ ತೊಂದರೆ ತಾಪತ್ರಯಗಳನ್ನು ಅನುಭವಿಸಿದ್ದಾರೆ. ನಾಗರೀಕ ಸಮುದಾಯದಲ್ಲಿ ಬದುಕಿ ಬಾಳಿ ಪ್ರತಿಯೊಬ್ಬರ ಬದುಕಿಗೆ ತಮ್ಮ ವಚನಗಳ ಮೂಲಕ ದಾರಿದೀಪವಾಗಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೇಮನರ ವಿದ್ಯಾವರ್ಧಕ ಸಂಘದ ಸ್ಥಳಿಯ ಶಾಖೆಯ ಅಧ್ಯಕ್ಷ ರಾಮಚಂದ್ರಪ್ಪ ರಾಯರಡ್ಡಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜದ ಮುಖಂಡರು, ಗಣ್ಯರು ಮತ್ತು ವೇಮನರ ಭಕ್ತರು ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಪುಷ್ಟ ನಮನ ಸಲ್ಲಿಸಿ ಭಕ್ತಿ ಸಮರ್ಪಣೆ ಮೆರೆದರು.
ಇದೇ ಸಂದರ್ಭದಲ್ಲಿ ಸೇವಾ ಸಾಧನೆ ಮೆರೆದ ಹೂಲಿಹಳ್ಳಿಯ ಗುತ್ತಿಗೆದಾರ ಅಶೋಕ ಬೆಳವಗಿ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಮಾಜದ ಗಣ್ಯರಾದ ಕೆ.ಡಿ.ಸಾವುಕಾರ, ಸುಭಾಷ ಸಾವುಕಾರ, ವೆಂಕಣ್ಣ ಕಡೂರ, ಯಲ್ಲಪ್ಪರಡ್ಡಿ ರಡ್ಡೇರ, ಮಧು ಕೋಳಿವಾಡ, ಡಾ. ಎಂ.ಎಂ ಅನಂತರಡ್ಡಿ ಮತ್ತಿತರರು ವೇಮನರ ಜೀವನ ಸಾಧನೆ ಮತ್ತು ಬದುಕು ಬರಹ ವಿಷಯ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಆರ್.ಡಿ.ಹೊಂಬರಡಿ, ವಿ.ಆರ್.ಗಿರಡ್ಡಿ, ಸದಸ್ಯರಾದ ಶ್ರೀನಿವಾಸ ಸಾವುಕಾರ, ಚಿದಾನಂದ ಹಾದಿಮನಿ, ಅಭಿಯಂತ ಅಶೋಕ ಯೋಗಿ, ಅನಂತ ಭಾನುವಳ್ಳಿ, ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶಿವಾನಂದ ಮೇಟಿ, ಸುರೇಶ ಕೋಟಿಹಾಳ, ಅಭಿಯಂತರ ಎಂ.ಆರ.ಗಿರಡ್ಡಿ ಸೇರಿದಂತೆ ಮತ್ತಿತರ ಗಣ್ಯರು ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.