ಬ್ಯಾಡ್ಗಿ

ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ

ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ

ಬ್ಯಾಡಗಿ 11: ಒನಕೆ ಓಬವ್ವನ ಸ್ಮಾರಕಗಳು ಎಲ್ಲೆಡೆ ಆಗಬೇಕೆನ್ನುವುದು ನಮ್ಮ ಆಶಯ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು. 

ಪಟ್ಟಣ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಶನಿವಾರ ಏರಿ​‍್ಡಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ವೀರವನಿತೆ ಒನಕೆ ಓಬವ್ವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸ್ವಾಮಿ ನಿಷ್ಠೆ, ಧೈರ್ಯ, ಸಮಯಸ್ಫೂರ್ತಿ ಮತ್ತು ತ್ಯಾಗದ ಸಂಗಮವಾಗಿರುವ ಒನಕೆ ಒಬವ್ವ ನಾಡುನುಡಿ ರಕ್ಷಣೆ ಮಾಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೀರ ಮಹಿಳೆಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. 

ಸಮಾನ್ಯ ಕುಟುಂಬದಲ್ಲಿ ಜನಿಸಿದ ಮಹಿಳೆ ಕಹಳೆಯನ್ನು ಉದುವಂತ ಒಬ್ಬ ಮುಗ್ದ ಹನುಮಪ್ಪನ ಪತ್ನಿ ಒನಕೆ ಓಬವಳ್ಳ ಸಾಹಸಗಾತೆಯ ಕಥೆಯನ್ನು ಮುಂದಿನ ಪಿಳಿಗೆಗೂ ತಿಳಿಸುವಂತಾಗಬೇಕು. ನಾವು ಕನ್ನಡ ಶಾಲೆಯಲ್ಲಿ ಒನಕೆ ಓಬವಳ್ಳ ಪಾಠವನ್ನು ಓದಿದ್ದು ಇಂದಿಗೂ ನೆನಪಿದೆ. ಅನೆಕ ವೀರನಾರಿಯರನ್ನು ಪಡೆದ ನಮ್ಮ ನಾಡು ಶೇಷ್ಠ ಎಂದರು.  

ತಹಶೀಲ್ದಾರ್ ಎಸ್‌.ಎ.ಪ್ರಸಾದ್, ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ, ಮುಖಂಡರಾದ ದಾನಪ್ಪ ಛೂರಿ, ದುರ್ಗೇಶ ಗೋಣೆಮ್ಮನವರ, ಖಾದರಸಾಬ ದೊಡ್ಡಮನಿ,  ಸುಭಾಷ ಓಲೇಕಾರ, ಮಂಜುನಾಥ ಓಲೇಕಾರ, ಮುರಗೆಪ್ಪ ಶೆಟ್ಟರ ಸೇರಿದಂತೆ ಇನ್ನಿತರರು ಇದ್ದರು. ಶಿಕ್ಷಕರಾದ ವಾಯ್‌.ಟಿ.ಹೆಬ್ಬಳ್ಳಿ ಉಪನ್ಯಾಸ ನೀಡಿದರು. ಗ್ರಾಮಲೆಕ್ಕಾಧಿಕಾರಿ ಶಶೀಧರಸ್ವಾಮಿ ಹಿರೇಮಠ ಸ್ವಾಗತಿಸಿ ವಂದಿಸಿದರು. 

ಸುದ್ದಿ ಓದಿ