ಡಿ.4 ರಂದು ವೀರಕೇಸರಿ ಅಮಟೂರು ಬಾಳಪ್ಪ ಉತ್ಸವ-2023
ಬೈಲಹೊಂಗಲ 03: ಜಿಲ್ಲಾಡಳಿತ ಬೆಳಗಾವಿ, ತಾಲೂಕಾಡಾಳಿತ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತ ಆಶ್ರಯದಲ್ಲಿ ಡಿ.4 ರಂದು ಸಂಜೆ 5ಕ್ಕೆ ಅಮಟೂರ ಗ್ರಾಮದ ವೀರಕೇಸರಿ ಅಮಟೂರು ಬಾಳಪ್ಪ ಗಾರ್ಡನ್ ಹತ್ತಿರ ಸರಕಾರಿ ಕನ್ನಡ ಶಾಲೆ ಆವರಣದಲ್ಲಿ ವೀರಕೇಸರಿ ಅಮಟೂರ ಬಾಳಪ್ಪ ಉತ್ಸವ-2023 ವಿಜೃಂಭಣೆಯಿಂದ ನಡೆಯಲಿದೆ.
ನಯಾನಗರದ ಶ್ರೀಗುರು ಅಭಿನವ ಸಿದ್ಧಲಿಂಗ ಸ್ವಾಮೀಜಿ, ಶಾಖಾಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಕುಂದರಗಿ ಮತ್ತು ಅಂಕಲಗಿಮಠದ ಅಮರೇಶ್ವರ ಶ್ರೀಗಳು, ಜಾಲಿಕೊಪ್ಪದ ಶಿವಾನಂದ ಗುರೂಜಿ, ಧಾರ್ಮಿಕ ಧತ್ತಿ ಇಲಾಖೆಯ ನಾಮ ನಿರ್ದೇಶಿತ ಸದಸ್ಯ ಡಾ.ವೇ.ಮೂ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ ಸಾನಿಧ್ಯವಹಿಸುವರು. ಲೋಕೋಪಯೋಗಿ ಇಲಾಖೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವಾರಜ್ ತಂಗಡಗಿ ಮುಖ್ಯಅತಿಥಿಯಾಗಿ ಆಗಮಿಸುವರು. ಶಾಸಕ ಮಹಾಂತೇಶ ಕೌಜಲಗಿ ಅದ್ಯಕ್ಷತೆವಹಿಸುವರು. ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಸರಕಾರದ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಸಂಸದರಾದ ಅನಂತಕುಮಾರ ಹೆಗಡೆ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಮಂಗಲಾ ಅಂಗಡಿ, ಶಾಸಕರಾದ ರಮೇಶ ಜಾರಕಿಹೊಳಿ, ಧುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ, ಗಣೇಶ ಹುಕ್ಕೇರಿ, ಅಭಯ ಪಾಟೀಲ, ಲಕ್ಷ್ಮಣ ಸವದಿ, ಭರಮಗೌಡ ಕಾಗೆ, ಮಹೇಂದ್ರ ತಮ್ಮಣ್ಣವರ, ನಿಖಿಲ ಕತ್ತಿ, ಆಸೀಫ್ ಸೇಠ್, ವಿಠ್ಠಲ ಹಲಗೇಕರ್, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಎಂಎಲ್ಸಿಗಳಾದ ಹಣಮಂತ ನಿರಾಣಿ, ಚನ್ನರಾಜ ಹಟ್ಟಿಹೊಳಿ, ಲಖನ ಜಾರಕಿಹೊಳಿ, ಎಂ.ನಾಗರಾಜು, ಗ್ರಾ.ಪಂ.ಅಧ್ಯಕ್ಷ ನಾರಾಯಣ ಶಿರೋಮಣಿ ಅತಿಥಿಗಳಾಗಿ ಆಗಮಿಸುವರು. ಬೆಳಗಾವಿಯ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ, ಬೆಳಗಾವಿಯ ಉತ್ತರ ವಲಯದ ಪೊಲೀಸ್ ಮಹಾನೀರೀಕ್ಷಕ ವಿಕಾಶ್ಕುಮಾರ್ ವಿಕಾಶ್, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಹರ್ಷಲ್ ಭೋಯರ್, ಉಪವಿಭಾಗಾಧಿಕಾರಿ ಪ್ರಭಾವತಿ ಎಫ್ ಉಪಸ್ಥಿತರಿರುವರೆಂದು ತಹಶೀಲ್ದಾರ ಸಚ್ಚಿದಾನಂದ ಕುಚನೂರ ತಿಳಿಸಿದ್ದಾರೆ.