ರಾಣೆಬೆನ್ನೂರ

ರಾಣೇಬೆನ್ನೂರಿನಲ್ಲಿ ಧರ್ಮ ಜಾಗ್ರತಿ ಮೂಡಿಸಿದ ವೀರಭದ್ರೇಶ್ವರ ದೇವರ ಗುಗ್ಗಳ ಮಹೋತ್ಸವ

ರಾಣೇಬೆನ್ನೂರಿನಲ್ಲಿ ಧರ್ಮ ಜಾಗ್ರತಿ ಮೂಡಿಸಿದ  ವೀರಭದ್ರೇಶ್ವರ ದೇವರ ಗುಗ್ಗಳ ಮಹೋತ್ಸವ

ರಾಣೆಬೆನ್ನೂರ ಫೆ 22: ಇಲ್ಲಿನ ಕೋಟೆಯ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀಗುರು ಲೆಕ್ಕದೇಶ್ವರ ದೇವಸ್ಥಾನ ಸಮಿತಿಯು ಪ್ರತಿ ವರ್ಷದ  ವಾರ್ಷಿಕ ಸಂಪ್ರದಾಯದ ಶ್ರೀ ವೀರಭದ್ರೇಶ್ವರ ದೇವರ ಗುಗ್ಗಳ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮವು ಅಪಾರ ಭಕ್ತ ಸಮೂಹದ ಮಧ್ಯ ವಿಜೃಂಭಣೆಯಿಂದ ನಡೆಯಿತು. ಇಲ್ಲಿನ ಕೊಟ್ಟೂರೇಶ್ವರ ನಗರದ ಕೊಟ್ಟೂರ ಬಸವೇಶ್ವರ ದೇವಸ್ಥಾನದಿಂದ ಹೊರಟ ಭವ್ಯ ಮಹೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ ಕೋಟೆಯ ದೇವಸ್ಥಾನಕ್ಕೆ ಬಂದು ಸಾಂಗತ್ಯಗೊಂಡಿತು. 

ಮೆರವಣಿಗೆಯ ಉದ್ದಕ್ಕೂ ಸಮಿತಿಯ ಅಧ್ಯಕ್ಷ ವೀರಣ್ಣ ಎಲ್ ಜಂಬಗಿ, ಉಪಾಧ್ಯಕ್ಷ ಸುಜಿತ್ ಚ. ಜಂಬಗಿ, ಕಾರ್ಯದರ್ಶೀ ಚಂದ್ರಶೇಖರ ಎಸ್. ಜಂಬಗಿ, ಖಜಾಂಚಿ ಕೊಟ್ರೇಶ ಎಸ್. ಗಾಮದ ಸದಸ್ಯರುಗಳಾದ ಪಿ.ಜಿ.ಪುರಾಣಿಕಮಠ, ವಿರೇಶ ಶಂಕ್ರಿಮಠ,  ಟಿ.ಬಿ.ಕುಬಸದ, ವೀರಣ್ಣ ಜಂಬಗಿ, ಜಿ.ವಿ.ಸಾಮಂತ್ರಿ, ಲೆಕ್ಕದಪ್ಪ ಜಂಬಗಿ, ಎಸ್.ಎಸ್. ಹೆದ್ದೇರಿ, ಕುಮಾರ ಜಂಬಗಿ, ಹಾಲೇಶಪ್ಪ ಕಟಗಿಹಳ್ಳಿ, ರಾಜೇಶ ಜಂಬಗಿ, ಉಮೇಶ ಗುಂಡಗಟ್ಟಿ, ರಾಜು ಜಂಬಗಿ, ವಿರುಪಾಕ್ಷಪ್ಪ ಜಿನಕೇರಿ, ವಿನೋದ ಜಂಬಗಿ, ಎಸ್.ಸಿ. ಬಣಗಾರ, ವಿಶ್ರಾಂತ ವಾಲಿ, ಶಿವರಾಜ ಮೂರ್ಖಂಡಿ, ಮಹದೇವಪ್ಪ ಕುಂದಗೋಳ, ಮೃತ್ಯುಂಜಯ ಮುಂಡಾಸದ, ರವಿ ಜಂಬಗಿ,  ಶಿವಯೋಗಿ ಆರ್.ಜಿ. ಶಶಿಧರ ಕೆ. ಪ್ರಸಾದಿಮಠ, ಶಾಸ್ತ್ರಿಗಳಾದ ಮುದುಕಯ್ಯ ಹಿರೇಮಠ, ಪ್ರಭಯ್ಯ ಮಠದ ಹಾಗೂ  ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಗಣ್ಯ ವರ್ತಕರು ಸೇರಿದಂತೆ ನೂರಾರು ಮಹಿಳೆಯರು ಕುಂಭ ಹೊತ್ತು ಭಾಗವಹಿಸಿದ್ದರು. ಅಟವಾಳಗಿ ಮತ್ತು ಕುಪ್ಪೇಲೂರ ಸಮಾಳ ಮತ್ತು ಪುರವಂತಿಕೆ ತಂಡವು ಮಹೋತ್ಸವದ ವಿಶೇಷ ಆಕರ್ಷಣೆಯಾಗಿತ್ತು.

ಸುದ್ದಿ ಓದಿ