ಚಿಕ್ಕೋಡಿ

ಸಂಕ್ರಮಣ ದಿನದಂದೇ ವೀರಭದ್ರೇಶ್ವರ ಉತ್ಸವ ಮೂರ್ತಿಗಳಿಗೆ ನದಿಯ ಸ್ನಾನ

ಸಂಕ್ರಮಣ ದಿನದಂದೇ ವೀರಭದ್ರೇಶ್ವರ ಉತ್ಸವ ಮೂರ್ತಿಗಳಿಗೆ ನದಿಯ ಸ್ನಾನ

ಮಾಂಜರಿ16: ಈ ವರ್ಷದ  ಮೊದಲ ಹಬ್ಬ ಸಂಕ್ರಮಣ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ  ಶ್ರೀವೀರಭದ್ರೇಶ್ವರ ಸಮ್ಮೇತ ಭದ್ರಕಾಳೇಶ್ವರಿ ಹಾಗೂ ಉತ್ಸವ ಮೂರ್ತಿಗಳಿಗೆ  ಇಂದು ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿಸಲಾಯಿತು.. ಇದೇ ವೇಳೆ  

ವೀರಭದ್ರೇಶ್ವರ, ಭದ್ರಕಾಳೇಶ್ವರಿ, ದಕ್ಷಭ್ರಷ್ಮ, ಪ್ರಸೂತಾ ದೇವಿ, ಶ್ರೀಶೈಲ್ ಮಲ್ಲಿಕಾರ್ಜುನ, ಬಸವಣ್ಣ, ಕಾಡಸಿದ್ದೇಶ್ವರ, ಉತ್ಸವ ಮೂರ್ತಿಗಳಿಗೆ ಸಕಲವಾದ್ಯದ ಸೇವೆಯ ಮೂಲಕ ವೀರಭದ್ರೇಶ್ವರ ದೇವಸ್ಥಾನದಿಂದ, ಕಾಡಸಿದೇಶ್ವರ ಮಠದ ಮೂಲಕ ಕೃಷ್ಣಾನದಿಯಲ್ಲಿ ಮೂರ್ತಿಗಳಿಗೆ ಭಕ್ತರು ಅತ್ಯಂತ ಭಕ್ತಿಭಾವದಿಂದ ಮೂರ್ತಿಗಳಿಗೆ ಸ್ನಾನವನ್ನು ಮಾಡಿಸಿದರು. ನಂತರ ಪಲ್ಲಕಿಯ ಮೂಲಕ ಉತ್ಸವಮೂರ್ತಿಗಳನ್ನು ಸಂಕ್ರಾಂತಿಯ ಕಟ್ಟೆಯವರೆಗೆ ಬಂದು ಕೂಡಿಸಲಾಯಿತು. 

ಇಲ್ಲಿಂದಲೇ ವಿದ್ಯುಕ್ತವಾಗಿ ಸಕ್ರಾಂತಿ ಹಬ್ಬಕ್ಕೆ ಚಾಲನೆಯನ್ನು ನೀಡಲಾಯಿತು. ಭಕ್ತರು ಅತ್ಯಂತ ಭಕ್ತಿಭಾವದಿಂದ ದೇವರ ದರ್ಶನ ಪಡೆದು ಪಾವನರಾದರು.ಇನ್ನೂ ಸಂಕ್ರಮಣ ಹಿನ್ನಲೆಯಲ್ಲಿ ಭಕ್ತರು ಸಹ ಕೃಷ್ಣಾನದಿಯಲ್ಲಿ ಸ್ನಾನವನ್ನು ಮಾಡಿದರು.  

ಅರ್ಚಕ ಮಹಾಲಿಂಗ ಭ್ರಿಂಗಿಯವರು ಮಾತನಾಡಿದ ಸೂರ್ಯಸಂಕ್ರಮಣ ಹಿನ್ನಲೆಯಲ್ಲಿ ಯಡೂರಿನಲ್ಲಿ ವೀರಭದ್ರೇಶ್ವರ ಸಮ್ಮೇತ ಭದ್ರಕಾಳೇಶ್ವರಿ ದೇವಿಯ ಹಾಗೂ ಉತ್ಸವಮೂರ್ತಿಗಳಿಗೆ ಪವಿತ್ರ ಕೃಷ್ಣಾನದಿಯ ಸ್ನಾನವು ಜರುಗಿತು..ಪೂರ್ವಜನ್ಮದ ಪಾಪ ಪರಿಹಾರಕ್ಕಾಗಿ ಇವತ್ತು ಭಕ್ತರು ಸಹ ಕೃಷ್ಣಾನದಿಯಲ್ಲಿ  ಸ್ನಾನವನ್ನು ಮಾಡಿ ಪಾವನರಾದರು ಎಂದರು.ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ಗ್ರಾಮದಲ್ಲಿ ವೀರಭದ್ರ ದೇವರ ಉತ್ಸವ ಮೂರ್ತಿಗಳನ್ನು ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವಾಗ ಭಕ್ತರು 


ಸುದ್ದಿ ಓದಿ