ವೀರಭದ್ರೇಶ್ವರ ರಥೋತ್ಸವ
ಬಳ್ಳಾರಿ 06: ಬೆಳಗಿನ ಜಾವ ಬಳ್ಳಾರಿಯ ಪಾರ್ವತಿ ನಗರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಅಗ್ನಿಕುಂಡ ಪ್ರವೇಶ ಮತ್ತು ಮಡಿ ತೇರಿನಲ್ಲಿ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಟಿ.ಹೆಚ್.ಎಂ.ಬಸವರಾಜ ರವರು ಸಮಾಳವಾದ್ಯ ಬಾರಿಸುತ್ತ ಅಗ್ನಿಪ್ರವೇಶ ಮಾಡಿ ಮಡಿತೇರಿನ ಮುಂದೆ ಸಮಾಳವಾದ್ಯ ಬಾರಿಸಿದರು. ಸಹಸ್ರಾರು ಜನರು ಉಪಸ್ಥಿತರಿದ್ದರು. ದೇವಸ್ಥಾನದ ಕಮಿಟಿಯ ಸದಸ್ಯರುಗಳಾದ ಕೆ.ಎನ್.ಎಂ.ಶ್ರೀಕಂಠಸ್ವಾಮಿ, ಬಾಸಿರೆಡ್ಡಿ, ಕಲ್ಮಮಠದ ಗುರುಪಾದಯ್ಯಸ್ವಾಮಿ, ಪ್ರಕಾಶ್ ಗುರುಶಾಂತಪ್ಪ, ಅಶೋಕಕುಮಾರ್, ಕಲ್ಲುಕಂಭ ಮಲ್ಲಿಕಾಜರ್ುನಗೌಡ ಮುಂತಾದವರು ಉಪಸ್ಥಿತರಿದ್ದರು.