ಇಂದಿನಿಂದ ಎರಡು ದಿನಗಳು ವಸಂತ ರಂಗೋತ್ಸವ ಹಾಗೂ “ರಂಗ ಸ್ನೇಹಿತ” ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿ
ಧಾರವಾಡ 03: ಸ್ನೇಹಿತರು ಕಲಾ ಸಂಘ(ರಿ), ಧಾರವಾಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ರಂಗಾಯಣ ಧಾರವಾಡ ಸಹಯೋಗದೊಂದಿಗೆ ದಿ. ಶ್ರೀ ಅಶೋಕ ಬೆಣ್ಣೂರು ರಂಗಭೂಮಿ ನಟ-ನಿರ್ದೇಶಕ, ಬಾಗಲಕೋಟ ಇವರ ನೆನಪಿನಲ್ಲಿ ಎರಡು ದಿನಗಳ ನಾಟಕೋತ್ಸವವನ್ನು ದಿನಾಂಕ 04.04.2026 ಹಾಗು ದಿನಾಂಕ 05.04.2026 ರಂದು ಧಾರವಾಡದ ಪಂ.ಬಸವರಾಜ ರಾಜಗುರು ಬಯಲು ರಂಗ ಮಂದಿರ, ರಂಗಾಯಣ, ಧಾರವಾಡದಲ್ಲಿ ಸಾಯಂಕಾಲ 6-30ಕ್ಕೆ ನಡೆಸಲಿದೆ.
ಮೊದಲ ದಿನದಂದು ಕಾರ್ಯಕ್ರಮದ ಉಧ್ಘಾಟಕರಾಗಿ ಕನ್ನಡ ಮತ್ತು ಸಂಸ್ಖೃತಿ ಇಲಾಖೆ, ಧಾರವಾಡದ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಎಂ.ವೈ. ಸಾವಂತ ನಿವೃತ್ತ ಪ್ರಾಧ್ಯಾಪಕರು ಧಾರವಾಡ. ಶ್ರೀಮತಿ ಶಶಿಕಲಾ ಹುಡೇದ ಆಡಳಿತಾಧಿಕಾರಿಗಳು ರಂಗಾಯಣ ಧಾರವಾಡ, ಅಧ್ಯಕ್ತತೆಯನ್ನು ಡಾ. ಚಂದ್ರಶೇಖರ ರೊಟ್ಟಿಗವಾಡ ಸಹ ನಿರ್ದೇಶಕರು, ಪ್ರಸಾರಂಗ ಕ.ವಿ,ವಿ, ಧಾರವಾಡ ವಹಿಸಲಿದ್ದು, ಸಂತೋಷ ಗಜಾನನ ಮಹಾಲೆ ಉಪಸ್ಥಿತರಿರುವರು ಪ್ರಾಸ್ತಾವಿಕ ವಿಜಯೀಂದ್ರ ಅರ್ಚಕ ಮಾಡಲಿದ್ದಾರೆ.
ನಂತರ ರೆಪರ್ಟರಿ ಕಲಾವಿದರು ರಂಗಾಯಣ ಧಾರವಾಡ ಪ್ರಸ್ತುತಿಯ ನಾಟಕ “ಮರಳಿ ಮಹಾತ್ಮನೆಡೆಗೆ” ರಚನೆ ಕುಮಾರ ಲಾಲಸಾಬ್ ಹಾಗೂ ಲಕ್ಷ್ಮಣ ಪೀರಗಾರ ಮಾಡಿದ್ದು ಸಂಗೀತ ಸಂಯೋಜನೆ ರಾಘವ ಕಮ್ಮಾರ ಪರಿಕಲ್ಪನೆ ಮಾರ್ಗದದರ್ಶನ ದಿ. ರಾಜು ತಾಳಿಕೋಟಿ, ಬೆಳಕಿನ ವಿನ್ಯಾಸ ಯೋಗೇಶ ಬಗಲಿ ನೀಡಲಿದ್ದಾರೆ.
ಎರಡನೇಯ ದಿನದಂದು ಡಾ. ಗೋವಿಂದ ಮಣ್ಣೂರ ಖ್ಯಾತ ನಾಟಕಕಾರರು ಹುಬ್ಬಳ್ಳಿ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಅಭಿನಯ ಭಾರತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ, ಬಸವಕೇಂದ್ರ ಧಾರವಾಡದ ಸಿದ್ದರಾಮ ನಡಕಟ್ಟಿ, ಹಾಗೂ ಹಿರಿಯ ರಂಗಭೂಮಿ ನಟಿ ಶ್ರೀಮತಿ ಮಾಲತಿ ಬೆಣ್ಣೂರ ಬೆಂಗಳೂರು ಇವರು ಆಗಮಿಸಲಿದ್ದು, ಇದರ ಅಧ್ಯಕ್ಷತೆಯನ್ನು ವಿಜಯೀಂದ್ರ ಅರ್ಚಕ ಮಾಡಲಿದ್ದಾರೆ. ಅಂದು “ರಂಗ ಸ್ನೇಹಿತ” ಪ್ರಶಸ್ತಿ ಹಿರಿಯ ರಂಗಭೂಮಿ ನಟ ಬಾಗಲಕೋಟದ ಪ್ರಮೋದ ಅಂಬೇಕರ ರವರಿಗೆ ಪ್ರಧಾನ ಮಾಡಲಾಗುವುದು,
ನಂತರ ಕಲಬುರಗಿ ವಿಶ್ವರಂಗ ತಂಡದಿಂದ ನಾಟಕ “ಕಲ್ಯಾಣಪುರ” ರಚನೆ ಡಾ. ವಿಕ್ರಮ ವಿಸಾಜಿ ಸಂಗೀತ ಸಂಯೋಜನೆ ರಾಘವ ಕಮ್ಮಾರ, ವಿನ್ಯಾಸ ಮತ್ತು ನಿರ್ದೇಶನ ಡಾ.ವಿಶ್ವರಾಜ ಪಾಟೀಲ, ಬೆಳಕು ವಿನೋದ ಪಾಟೀಲ ಮಾಡಲಿದ್ದಾರೆ ಎಂದು ಅಧ್ಯಕ್ಷರಾದ ವಿಜಯೀಂದ್ರ ಅರ್ಚಕ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.