ಶಿಗ್ಗಾವ್

ಬ್ರೀಡ್ಜ ಕಾಮಗಾರಿ ವಿಳಂಬಕ್ಕೆ ವರುಣ ಪಾಟೀಲ ಆಕ್ರೋಶ

ಬ್ರೀಡ್ಜ ಕಾಮಗಾರಿ ವಿಳಂಬಕ್ಕೆ ವರುಣ ಪಾಟೀಲ ಆಕ್ರೋಶ

ಶಿಗ್ಗಾವಿ 19: ತಾಲೂಕಿನ ಕುನ್ನೂರ ಮತ್ತು ಶ್ಯಾಡಂಬಿ ಮಧ್ಯದಲ್ಲಿರುವ  ಬೆಣ್ಣೆ ಹಳ್ಳಕ್ಕೆ ನಿರ್ಮಿಸುತ್ತಿರುವ ಬ್ರೀಡ್ಜ ಕಾಮಗಾರಿಯು ಕಳೆದ ಒಂದು ವರ್ಷದಿಂದ ನೆಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿರುವುದಿಲ್ಲ ರಾಷ್ಟ್ರೀಯ ಹೆದ್ದಾರಿ 4 ರ ಶ್ಯಾಡಂಬಿ ಕುನ್ನೂರ ಮಾರ್ಗವಾಗಿ ಹಾನಗಲ್ಲ ಮತ್ತು ಮುಂಡಗೋಡಗೆ ಸಂಪರ್ಕ ಕಲ್ಪಿಸುವ ದಾರಿಯಾಗಿದ್ದು ಗುತ್ತಿಗೆದಾರರ ವಿಳಂಬ ಹಾಗೂ ನಿರ್ಲಕ್ಷದಿಂದ ಕೆಲಸ ಅಪೂರ್ಣವಾಗಿದೆ ಕಳೆದ ಒಂದು ವಾರದಿಂದ ಮಳೆಯಾಗುತ್ತಿದ್ದರಿಂದ ಬೆಣ್ಣೆ ಹಳ್ಳಕ್ಕೆ ಅಪಾರ ಪ್ರಮಾಣದ ನೀರು ಬಂದು ಪಕ್ಕದ ಹೊಲದಲ್ಲಿ ಮಾಡಿದ ರಸ್ತೆ ಬಂದಾಗಿದ್ದು ಇಲ್ಲಿ ನಿತ್ಯ ಸಂಚರಿಸುವ ಸಾವಿರಾರು ಸವಾರರಿಗೆ ತೊಂದರೆಯಾಗಿದೆ ಎಂದು ರೈತ ಸೇನಾ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇಸಿಗೆಯಲ್ಲಿ ಕಾಲಹರಣ ಮಾಡಿದ ಗುತ್ತಿಗೆದಾರರು ಕೆಲಸವನ್ನು ವಿಳಂಬ ಮಾಡಿ ಇಂದು ಸಾವಿರಾರು ಜನರ ಸಂಚಾರಕ್ಕೆ ಸಂಚಕಾರ ತಂದು ತೊಂದರೆ ಮಾಡಿದ್ದಾರೆ ಎಂದು ಗುತ್ತಿಗೆದಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು ಗುತ್ತಿಗೆದಾರರ ಪರವಾನಿಗೆ ರದ್ದುಪಡಿಸಬೇಕು ಹಾಗೂ ಬೇರೆ ಗುತ್ತಿಗೆದಾರರಿಂದ ಬೇಗನೆ ಕೆಲಸವನ್ನು ಪೂರ್ಣಗೋಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರಕಾರದ ವಿರುದ್ದ ಪ್ರತಿಭಟನೆ ನೆಡಸಲಾಗುವುದು ಎಂದು ಎಚ್ಚರಿಸಿದರು. 


ಸುದ್ದಿ ಓದಿ