ಶಿಗ್ಗಾವ್

ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿವಿಧ ಕಾರ್ಯಕ್ರಮ

ಬಸವರಾಜ ಬೊಮ್ಮಾಯಿಯವರ ಹುಟ್ಟು ಹಬ್ಬದ ನಿಮಿತ್ಯ ವಿವಿಧ ಕಾರ್ಯಕ್ರಮ

ಶಿಗ್ಗಾವಿ 17:  ಮಾಜಿ ಮುಖ್ಯಮಂತ್ರಿ ಹಾಗೂ ಶಿಗ್ಗಾವಿ ಸವಣೂರ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರ  64 ನೇ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ  ತಿಳಿಸಿದರು. 

ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಿ. 19 ರಂದು ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ, ಜ. 20 ರಂದು ರಕ್ತದಾನ ಶಿಬಿರ ಏರಿ​‍್ಡಸಲಾಗಿದ್ದು ಈ ಕಾರ್ಯಕ್ರಮಗಳು ಬಸವರಾಜ ಬೊಮ್ಮಾಯಿಯವರ ನಿವಾಸದ ಸಭಾಭವನದಲ್ಲಿ ನಡೆಯಲಿದ್ದು ಜ. 28 ರಂದು ಅಂತರಾಷ್ಟ್ರೀಯ ಮಟ್ಟದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಆಳ್ವಾ ಸಾಂಸ್ಕೃತಿಕ ತಂಡದಿಂದ ಕಾರ್ಯಕ್ರಮಗಳು ಪಟ್ಟಣದ ಸಂತೆ ಮೈದಾನದಲ್ಲಿ ನಡೆಯಲಿವೆ. 

ದಿ. 26 ರಂದು ದಿ. ಗಂಗಮ್ಮಾ ಸೋಮಪ್ಪಾ ಬೊಮ್ಮಾಯಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್ ಮಾಳಗಿ, ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ದೇವಣ್ಣಾ ಚಾಕಲಬ್ಬಿ, ಬಸನಗೌಡ್ರ ಮೇಲಿನಮನಿ, ಡಾ. ಫಕ್ಕಿರಗೌಡ ಪಾಟೀಲ್, ಹನುಮರೆಡ್ಡಿ ನಡುವಿನಮನಿ, ಗಂಗಣ್ಣಾ ಸಾತಣ್ಣವರ, ರವಿ ಕೂಡವಕ್ಕಲ, ಉಮೇಶ ಅಂಗಡಿ, ಕರಿಯಪ್ಪಾ ಕಟ್ಟಿಮನಿ, ಶಿವಪ್ರಾಸದ ಸುರಗಿಮಠ, ರೂಪಾ ಬನ್ನಿಕೊಪ್ಪ, ಸಂಗೀತಾ ವಾಲ್ಮಿಕಿ, ಮಂಜು ಬ್ಯಾಹಟ್ಟಿ, ಶ್ರೀಕಾಂತ ಬುಳ್ಳಕ್ಕನವರ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ತಾಲೂಕಿನ ಮಂಡಲದ ಪದಾದಿಕಾರಿಗಳು, ಬಿಜೆಪಿ ಮುಖಂಡರು, ಬೊಮ್ಮಾಯಿ ಅಭಿಮಾನಿಗಳು ಇದ್ದರು. 


ಸುದ್ದಿ ಓದಿ