ತಾಳಿಕೋಟಿ

ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ವಿವಿಧ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ತಾಳಿಕೋಟೆ21: ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಕಾರ್ಯಕಾರಣಿ ಸಭೆ ಹಾಗೂ ವಿವಿಧ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಜೆಡಿಎಸ್ ಮುಖಂಡ ರಾಜು ಗೌಡ ಪಾಟೀಲ( ಕುದುರೆ ಸಾಲೋಡಗಿ) ಮಾತನಾಡಿ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಪಕ್ಷ ಜನರ ಆರ್ಶಿರ್ವಾದದಿಂದ ಬಂದಿರುವ ಪಕ್ಷವಲ್ಲ ಆಪರೇಷನ್ ಕಮಲ ಪಕ್ಷವಾಗಿದೆ. ಜೆಡಿಎಸ್ ಪಕ್ಷ ಆಡಳಿತಾವಧಿಯಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ನೀಡಿರುವ ಪಕ್ಷವಾಗಿ ಹೊರಹೊಮ್ಮಿದೆ. ಮತಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಪಿರಾಪುರ ಏತ ನೀರಾವರಿ ಕಾಮಗಾರಿ ಅವೈಜ್ಞಾನಿಕ ಕಾಮಗಾರಿಯಾಗಿದೆ. ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಗಳಾದ  ಪಟ್ಟಣ ಪ್ರದೇಶದಲ್ಲಿರುವ ಸಿ ಬಿ ಎಸ್ ಸಿ ಶಾಲೆಗಳನ್ನು ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ನಿರ್ಮಿಸುವುದು. ರಾಜ್ಯದ 6000 ಗ್ರಾಮ ಪಂಚಾಯಿತಿಗಳಲ್ಲಿ ಸುಸಜ್ಜಿತ ದವಾಖಾನೆಗಳು ನಿರ್ಮಾಣ  ಮಾಡುವುದು. ಮಹಿಳೆಯರ ಸಬಲೀಕರಣಕ್ಕೆ ಪ್ರಾಶಸ್ತ್ಯ ನೀಡುವುದು. ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ  ರೈತರು ಬೆಳೆದ ಬೆಳೆ ಸಂಗ್ರಹಕ್ಕೆ  ಗೋಡಾವನ ನಿರ್ಮಾಣ  ಮಾಡುವುದು. ಮನೆಯ ರಹಿತ ಕುಟುಂಬಗಳಿಗೆ ಮನೆ ನಿರ್ಮಾಣ  ಮಾಡಿ ಕೊಡುವುದು ಈ ರೀತಿಯಾಗಿ ಜೆಡಿಎಸ್ ಪಕ್ಷದ ಯೋಜನೆಗಳಾಗಿವೆ ಎಂದು ತಿಳಿಸಿದರು. ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಸನಗೌಡ ಮಾಡಗಿ ಮಾತನಾಡಿ ಸಮ್ಮಿಶ್ರ ಸರ್ಕಾರ ದ ಅವಧಿಯಾದ 2006ರಿಂದ 2008ರಲ್ಲಿ ಕುಮಾರಸ್ವಾಮಿಯವರು ರೈತರ 25 ಸಾವಿರ ಸಾಲ ಮನ್ನಾ ಹಾಗೂ ಕಡಿಮೆ ಪ್ರಮಾಣದಲ್ಲಿದ್ದ ಗೌರವಧನ ಸಾವಿರ ರೂಪಾಯಿಗಳಿಗೆ ಏರಿಸಿ ಜನರ ಮನದಲ್ಲಿ ನೆಲೆಸಿದ್ದಾರೆ. ಮುಂಬರುವ 2023ರ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 30000 ಅಂತ ತರದ ಗೆಲುವು ಜೆಡಿಎಸ್ ಪಕ್ಷಕ್ಕೆ ದೊರೆಯುವ ಆತ್ಮವಿಶ್ವಾಸ ನನಗಿದೆ ಎಂದರು. ಮಡುಸೌಹುಕಾರ  ಬಿರಾದಾರ ತಾಲೂಕ ಜೆಡಿಎಸ್ ಕಾರ್ಯಧ್ಯಕ್ಷರು ಮಾತನಾಡಿ ಕಳೆದ 2018 ವಿಧಾನಸಭೆ ಚುನಾವಣೆಯಲ್ಲಿ 1678ರ ಮತಗಳಿಂದ ಸೋಲು ಅನುಭವಿಸಿದರು ಸಹ ರಾಜುಗೌಡರು  ಈ ಮತಕ್ಷೇತ್ರದ ಜನರ ಹೃದಯ ಸಾಮ್ರಾಟರಾಗಿ ಹೊರಹೊಮ್ಮಿದ್ದಾರೆ. ಮುಂಬರುವ ಚುನಾವಣೆಯಲ್ಲಿ  ಕಾರ್ಯಕರ್ತರು ಭೂತ ಮಟ್ಟದಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತ ಹಾಕಿಸುವ ಮೂಲಕ ಗೆಲ್ಲಿಸೋಣ ಎಂದು ತಿಳಿಸಿದರು. ವಿವಿಧ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಗ್ರಾಮದ ಕಾರ್ಯಕರ್ತರಿಗೆ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಗುಡಿಮನಿ, ಮಾಶಾಕಸಾಬ  ಚೌದ್ರಿ, ಜಿಲ್ಲಾ ಕಾರ್ಯದರ್ಶ ಗಳಾದ ಶೇಖರಗೌಡ ಪಾಟೀಲ, ಗುರನಗೌಡ ಪಾಟೀಲ, ಶರಣು ಧರಿ ತಾಲೂಕು ಘಟಕದವರಾದ ಸಾಯಬಣ್ಣ ಬಾಗೇವಾಡಿ, ಬಸನಗೌಡ ಬಿರಾದಾರ( ರಬಿನಾಳ) ರಿಯಾಜ್ ನಾಯ್ಕೋಡಿ,ಮುನ್ನಾ ಮಲಖೇಡ, ರಾಘು ಗುಡಿಮನಿ, ಸುನೀಲ ಮಾಗಿ, ರೇಣುಕಾ ಅಂಗಡಿ, ವಿಶ್ವನಾಥ ಬಿದರಕುಂದಿ, ಈರ ಗಂಟೆಪ್ಪ ಬಡಿಗೇರ, ಪುಷ್ಪಾ ಲಕ್ಕುಂಡಿಮಠ, ಮುರುಗೇಶ ತಾಳಿಕೋಟಿ, ಮಲ್ಲಪ್ಪ ಕಲ್ಲೂರ ಹಲವಾರು ಮುಖಂಡರು ಉಪಸ್ಥಿತರಿದ್ದರು 

ಸುದ್ದಿ ಓದಿ