ಬ್ಯಾಡ್ಗಿ

ಮೆಣಸಿನಕಾಯಿ ದರದಲ್ಲಿ ವ್ಯತ್ಯಾಸ, ರೈತರ ಪ್ರತಿಭಟನೆ

ಮೆಣಸಿನಕಾಯಿ ದರದಲ್ಲಿ ವ್ಯತ್ಯಾಸ, ರೈತರ ಪ್ರತಿಭಟನೆ

ಬ್ಯಾಡಗಿ 09: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಮೆಣಸಿನಕಾಯಿ ದಲಾಲಿ ಅಂಗಡಿಯೊಂದರಲ್ಲಿ ರೈತರೊಬ್ಬರು ಟೆಂಡರ್‍ಗಿಟ್ಟಿದ್ದ ಒಣ ಮೆಣಸಿನಕಾಯಿಗೆ ದರದಲ್ಲಿ ವ್ಯತ್ಯಾಸ ಮಾಡಿದ್ದರಿಂದ ಆಕ್ರೋಶಗೊಂಡ ರೈತ ನೂರಾರು ರೈತರ ಜೊತೆಗೂಡಿ ಸೋಮವಾರ ಸಂಜೆ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿಭಟನೆ ನಡೆಸಿದರು.

ಎಪಿಎಂಸಿ ಮಾರುಕಟ್ಟೆ ಅಂಗಡಿಯೊಂದರಲ್ಲಿ ರೈತರು ಸೋಮವಾರ ಟೆಂಡರ್‍ನಲ್ಲಿಟ್ಟಿದ್ದ ಒಣ ಮೆಣಸಿನಕಾಯಿಗೆ ಖರೀದಿದಾರರು 21800 ರೂ, ದರ ನಿಗದಿ ಮಾಡಿದ್ದರು. ಆದರೆ ಅಂಗಡಿಯ ಮಾಲೀಕರು ಚೀಲದ ಮೇಲೆ 17 ಸಾವಿರ ರೂ. ನಮೂದಿಸಿದ್ದು, ಇದರಿಂದ ಗೊಂದಲಕ್ಕೀಡಾದ ರೈತ ಅಂಗಡಿಯವರೊಂದಿಗೆ ವಾಗ್ವಾದ ನಡೆಸಿದ. ನಂತರ ಸ್ಥಳದಲ್ಲಿದ್ದ ನೂರಾರು ರೈತರೊಂದಿಗೆ ಸೇರಿಎಪಿಎಂಸಿ ಕಾರ್ಯಾಲಯದ ಎದುರು ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನೆ ಸುದ್ದಿ ತಿಳಿದ ತಕ್ಷಣ ಸಿಪಿಐ ಬಸವರಾಜ, ಪಿಎಸ್‍ಐ ಎಂ.ಎಂ. ಮಹಾಂತೇಶ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿ ರೈತರ ಸಮಸ್ಯೆ ಆಲಿಸಿ, ಎಪಿಎಂಸಿ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ಸುದ್ದಿ ಓದಿ