ಹೂವಿನ ಹಡಗಲಿ

ವರ್ಧಮಾನ್ ಮಹಾವೀರರ ಸಂದೇಶಗಳು ವಿಶ್ವಕ್ಕೆ ಮಾದರಿ : ಗುರುಬಸವರಾಜಯ್ಯ

ವರ್ಧಮಾನ್ ಮಹಾವೀರರ ಸಂದೇಶಗಳು ವಿಶ್ವಕ್ಕೆ ಮಾದರಿ : ಗುರುಬಸವರಾಜಯ್ಯ

ಹೂವಿನಹಡಗಲಿ 25. 24ನೇ ತೀರ್ಥಂಕರ ಭಗವಾನ್ ಮಹಾವೀರರ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದು ಉಪನ್ಯಾಸಕ ಹೆಚ್.ಎಂ. ಗುರುಬಸವರಾಜಯ್ಯ ಹೇಳಿದರು.ಪಟ್ಟಣದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ಅತ್ಯಂತ ಸರಳವಾಗಿ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿಯಲ್ಲಿ ಅವರು ಮಾತನಾಡಿದರು. ಸರ್ವ ಭಾಗ್ಯಗಳನ್ನು ತ್ಯಜಿಸಿದ ಮಹಾವೀರರು ಅಹಿಂಸಾ ಪರಮೋ ಧರ್ಮವನ್ನು ಬೋಧಿಸಿದ ಪುಣ್ಯಪುರುಷರು ಎಂದರು. ಪ್ರಸ್ತುತ ದಿನಗಳಲ್ಲಿ ಅವರ ಸತ್ಯ, ತ್ಯಾಗ, ಅಹಿಂಸಾ ತತ್ವಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು. ನಮ್ಮ ಸನಾತನ ಪರಂಪರೆಯ ಆಚರಿಸಿಕೊಂಡು ಬಂದಿರುವ ವೈಚಾರಿಕ ಅಂಶಗಳನ್ನು ಅಳವಡಿಸಿಕೊಂಡರೆ ಕೊರೋನಾದಂತಹ ರೋಗಗಳನ್ನು ದೂರವಿಡಲು ಸಾಧ್ಯ ಎಂದು ಹೇಳಿದರು.ಶಿಕ್ಷಕ ಕೆ. ಮಾದೇಶ್, ಜೈನ ಸಮಾಜದ ಅಧ್ಯಕ್ಷ ಹೆಚ್.ಎನ್. ಪ್ರಶಾಂತ ಮಾತನಾಡಿದರು. ಪ್ರಭಾರಿ ತಹಸೀಲ್ದಾರ್ ಹೆಚ್. ಪ್ರಭಾಕರಗೌಡ, ಜೈನ ಸಮಾಜದ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಪುರಸಭಾ ಸದಸ್ಯ ಮಂಜುನಾಥ ಜೈನ್, ಭಾರತೀಯ ಜೈನ್ ಮಿಲನ್ ತಾಲೂಕಾ ಘಟಕದ ಅಧ್ಯಕ್ಷ ಸಂತೋಷ್ ಜೈನ್, ಪದ್ಮರಾಜ್ ಜೈನ್, ಕಛೇರಿ ಸಿಬ್ಬಂದಿ ಎ. ಅಂಬರೀಷ್, ಐ. ಕೋಟೆಪ್ಪ, ಟಿ. ಮಲ್ಲಿಕಾರ್ಜುನ ಇವರುಗಳ ಸಮ್ಮುಖದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯತು.

ಸುದ್ದಿ ಓದಿ