ಗೋಕಾಕ್

ವಣ್ಣೂರ ಸರಕಾರಿ ಕಾಲೇಜು ಅತ್ಯುತ್ತಮ ಸಾಧನೆ

ವಣ್ಣೂರ ಸರಕಾರಿ ಕಾಲೇಜು ಅತ್ಯುತ್ತಮ ಸಾಧನೆ

ಗೋಕಾಕ 15: ಸಮೀಪದ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಕಾಲೇಜಿಗೆ 92.30ಅ ರಷ್ಟು ಫಲಿತಾಂಶ ತಂದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.  

4 ಡಿಸ್ಟ್ರಿಕ್ಷನ್, 12 ಪ್ರಥಮ ದರ್ಜೆ 6 ದ್ವಿತೀಯ ದರ್ಜೆ 2 ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

 ಇವರಲ್ಲಿ ಐಶ್ವರ್ಯ ಈರ​‍್ಪ ಅಂಗಡಿ 91.83ಅ, ಐಶ್ವರ್ಯ ಮೋಹನ್ ಬಡಿಗೇರ 90.66ಅ , ಪಾರವ್ವ ಶಿವಪ್ಪ ತಳವಾರ 88.66ಅ , ಕವಿತಾ ಹಳಬಣ್ಣವರ 86.16ಅ (ಕನ್ನಡ 100ಕ್ಕೆ 100 ) ರಷ್ಟು ಅಂಕ ಪಡೆದು ಈ ವಿದ್ಯಾರ್ಥಿನಿಯರು ಕಾಲೇಜಿಗೆ ಕೀರ್ತಿ ತಂದಿದ್ದಾರೆ. 

ಈ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿದ ಸಿಬಿಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ವಣ್ಣೂರ  ಗ್ರಾಮದ ಸಮಸ್ತ ನಾಗರಿಕರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ