ಬ್ಯಾಡ್ಗಿ

ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ

ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ

ಬ್ಯಾಡಗಿ 15: ನಮ್ಮ ಸುತ್ತಲಿನ ಪರಿಸರವನ್ನು ಹಸಿರುಗೊಳಿಸುವುದರಿಂದ ಮಾತ್ರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಈ ದಿಸೆಯಲ್ಲಿ ಎಲ್ಲರೂ ಪರಿಸರ ಸಂರಕ್ಷಣೆ ಜವಾಬ್ದಾರಿ ಹೊತ್ತುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ್ ಹೊಳಿಯಪ್ಪಗೋಳ ಹೇಳಿದರು ಪಟ್ಟಣದಲ್ಲಿ ರವಿವಾರ ಅವರು ತಾಲೂಕಾ ಪರಿಸರ ಸ್ನೇಹಿ ಬಳಗ ಹಾಗೂ ಪುರಸಭೆ ಆಶ್ರಯದಲ್ಲಿ ಮಲ್ಲೂರ ರಸ್ತೆಯ ಬದಿಗಳಲ್ಲಿ ವನಮಹೋತ್ಸವದ ನಿಮಿತ್ಯ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.  

ಪ್ರತಿಯೊಬ್ಬರು ಪರಿಸರದ ಕಾಳಜಿಯನ್ನು ಇಟ್ಟುಕೊಂಡು ಸಸಿಗಳನ್ನು ನೆಟ್ಟು ಪರಿಸರ ಸಮತೋಲನ ಕಾಪಾಡಬೇಕು. ನಿರಂತರವಾಗಿ ಗಿಡಗಳನ್ನು ನೆಟ್ಟು ಮುಂದಿನ ಭವಿಷ್ಯದ ಪೀಳಿಗೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದರು. ತಾಲೂಕಾ ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಸಿ.ಎಚ್‌.ಮೋಹನಕುಮಾರ  ಮಾತನಾಡಿ, ಸಸ್ಯ ಸುಂಕುಲ ಅಪಾರವಾದ ಓಷಧಿಯ ಗುಣಗಳನ್ನು ಹೊಂದಿದ್ದು ಮಾರಕ ಕಾಯಿಲೆಗಳನ್ನು ವಾಸಿ ಮಾಡುವ ಗುಣ ಹೊಂದಿದೆ. ಹೆಚ್ಚೆಚ್ಚು ಗಿಡಗಳನ್ನು ನೆಟ್ಟು ಈಗಾಗಲೇ ಪರಿಸರ ಅಸಮತೋಲನ ಉಂಟಾಗಿದ್ದು ಅದನ್ನು ತಪ್ಪಿಸಿ ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಈ ಭೂಮಂಡಲದಲ್ಲಿ ಪ್ರಾಣಿ ಪಕ್ಷಿ ಮನುಷ್ಯರಿಗೆ ಹೇಗೆ ಬದುಕುವ ಹಕ್ಕು ಇದೆಯೋ ಹಾಗೆಯೇ ಸಸ್ಯಗಳಿಗೂ ಬದುಕುವ ಹಕ್ಕಿದೆ. ನಮಗೆ ಹೇಗೆ ಜೀವ ಇದೆಯೋ ಗಿಡ ಮರಗಳಿಗೂ ಜೀವವಿದೆ. ಕೇವಲ ಅರಣ್ಯ ಇಲಾಖೆ ಗಿಡಗಳನ್ನು ನೆಡಬೇಕೆಂಬ ಮನೋಭಾವ ಸಮಾಜ ಬಿಡಬೇಕು. ಸಸಿಗಳನ್ನು ನೆಡುವ ಕರ್ತವ್ಯ ಪ್ರತಿಯೊಬ್ಬರೂ ಮಾಡಬೇಕೆಂದರು.ಈ ಸಂದರ್ಭದಲ್ಲಿ ಈರಣ್ಣ ಚಿನ್ನಗುಡಿ, ರುದ್ರೇಶ, ಕಲ್ಲಪ್ಪ ಚೂರಿ, ಮಂಜುನಾಥ, ನಾಗರಾಜ್ ಕರ್ನೂಲ, ಮಂಜುನಾಥ ಹೊಸಮನಿ,  ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ