ಯರಗಟ್ಟಿ

ರಾಷ್ಟ್ರೀಯ ಹಾಕಿ ತಂಡಕ್ಕೆ ವೈಷ್ಣವಿ ಇಟ್ನಾಳ ಆಯ್ಕೆ

ರಾಷ್ಟ್ರೀಯ ಹಾಕಿ ತಂಡಕ್ಕೆ ವೈಷ್ಣವಿ ಇಟ್ನಾಳ ಆಯ್ಕೆ

ಯರಗಟ್ಟಿ 26 : ಸಮೀಪದ ಸೊಪ್ಪಡ್ಲ ನಿವಾಸಿ ವೈಷ್ಣವಿ ಇಟ್ನಾಳ ಅವರು ಸ್ಕೂಲ್ ಗೇಮ್ಸ್‌ ಆಫ್ ಫೆಡರೇಶನ್ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯತಂಡಕ್ಕೆ ಆಯ್ಕೆಯಾಗಿದ್ದಾರೆ.  

ಕೊಡಗಿನ ಸರಕಾರಿ ಶಾಲಾ ಮೈದಾನದಲ್ಲಿ ನಡೆದ 14 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ಬೆಳಗಾವಿ ವಿಭಾಗ ಜಯಗಳಿಸಿದೆ. ವೈಷ್ಣವಿ ಹಾಗೂ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.  

ಪ್ರಾಂಶುಪಾಲ ನವೀನ ಶೆಟ್ಟಿಗಾರ, ಕ್ರೀಡಾ ಶಿಕ್ಷಕ ಜಯಸಿಂಗ್ ಧನಾಜಿ, ಸಂಸ್ಥೆಯ ಅಧ್ಯಕ್ಷ ಆಡ್ ಚಂದ್ರಹಾಸ ಅಣೇಕರ್ ಮಾರ್ಗದರ್ಶನ ನೀಡಿದರು.  

ಈ ವೇಳೆ ಸಮೀದಪ ಸೊಪ್ಪಡ್ಲ ಗ್ರಾಮದಲ್ಲಿ ವೈಷ್ಣವಿ ತಂದೆ ತಾಯಿ ಹರ್ಷವ್ಯಕ್ತಪಡಿಸಿದರು. 


ಸುದ್ದಿ ಓದಿ