ತಾಳಿಕೋಟಿ

ವಡವಡಗಿ ಗ್ರಾಮಪಂಚಾಯತ ಬಿಜೆಪಿ ತೆಕ್ಕೆಗೆ

ವಡವಡಗಿ ಗ್ರಾಮಪಂಚಾಯತ ಬಿಜೆಪಿ ತೆಕ್ಕೆಗೆ

ತಾಳಿಕೋಟಿ02: ದೇ.ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡವಡಗಿ ಗ್ರಾಮ ಪಂಚಾಯತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ತಾರಾಬಾಯಿ ರಮೇಶ ಚವ್ಹಾಣ ಅಧ್ಯಕ್ಷೆಯಾಗಿ ಹಾಗೂ ನೀಲಮ್ಮ ಮಲ್ಲಪ್ಪ ಬ್ಯಾಳಿ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 23 ಸದಸ್ಯ ಬಲದ ಪಂಚಾಯತನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ 20 ಜನ ಸದಸ್ಯರು ಭಾಗವಹಿಸಿದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ತಾರಾಬಾಯಿ ರಮೇಶ ಚವ್ಹಾಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನೀಲಮ್ಮ ಮಲ್ಲಪ್ಪ ಬ್ಯಾಳಿ ಇವರಿಬ್ಬರೆ ನಾಮಪತ್ರ ಸಲ್ಲಿಸಿರುವದರಿಂದ ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾ.ಪಂ ಇಓ ಭಾರತಿ ಚಲುವಯ್ಯ ಘೋಷಿಸಿದರು.

ವಿಜಯೋತ್ಸವ: ತಮ್ಮ ಪಕ್ಷದ ಬೆಂಬಲಿತ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದರೆಂದು ತಿಳಿಯುತ್ತಲೆ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ವಿಜಯೋತ್ಸವ ಆಚರಿಸಿದರು. 

ಈ ಸಂದರ್ಭದಲ್ಲಿ ಮುಖಂಡರಾದ ಮಂಜುಗೌಡ ಹೊಸಗೌಡರ, ಮಾಜಿ ಅಧ್ಯಕ್ಷೆ ಶಿವಮ್ಮ ಮ ಮಾಸ್ತಿ, ಉಪಾಧ್ಯಕ್ಷೆ ಗಂಗಮ್ಮ ಶ ನರಸಲಗಿ, ತಾ.ಪಂ. ಮಾಜಿ ಸದಸ್ಯ ಮಲ್ಲು ತಳವಾರ, ಸಿದ್ಧನಗೌಡ ಮಡಿಕೇಶ್ವರ, ರಾಮನಗೌಡ ಬಿರಾದಾರ, ಜಗದೀಶ ಕೊಂಡಗೂಳಿ, ಮಲ್ಲನಗೌಡ ಧನ್ನೂರ, ಶರಣಗೌಡ ನಾಡಗೌಡ, ಹಾಗೂ ಶರಣು ಬಡಿಗೇರ, ಉಪಸ್ಥಿತರಿದ್ದರು 

ಸುದ್ದಿ ಓದಿ