ರಾಷ್ಟ್ರೀಯ

ಕೊರೊನಾ ಲಸಿಕೆ ಹೆಸರಿನಲ್ಲಿ ಹಣ ಪಡೆಯುವ ವಂಚಕರ ಜಾಲ ಬಯಲಿಗೆ; ಭೋಪಾಲ್ ನಲ್ಲಿ ಲಸಿಕೆ ಹಗರಣ

ಕೊರೊನಾ ಲಸಿಕೆ ಹೆಸರಿನಲ್ಲಿ ಹಣ ಪಡೆಯುವ ವಂಚಕರ ಜಾಲ ಬಯಲಿಗೆ; ಭೋಪಾಲ್ ನಲ್ಲಿ ಲಸಿಕೆ ಹಗರಣ

ಭೋಪಾಲ್, ಡಿಸೆಂಬರ್ 30: ಕೊರೊನಾ ಲಸಿಗೆ ಹಗರಣ ಬೆಳಕಿಗೆ ಬಂದಿದೆ. ಭೋಪಾಲ್ ನಲ್ಲಿ ಲಸಿಕೆ ನೋಂದಣಿಗಾಗಿ ಹಣ ಪಾವತಿಸುವಂತೆ ಕರೆ ಮಾಡಿ ವಂಚನೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮೊದಲ ಹಂತದಲ್ಲಿ ಕೊರೋನವೈರಸ್ ವಿರುದ್ಧ ಲಸಿಕೆ ಪಡೆಯಲು ಕುಟುಂಬ ಸದಸ್ಯರ ಹೆಸರು ನೋಂದಾಯಿಸಲು  500 ರೂಪಾಯಿ ಪಾವತಿಸುವಂತೆ ಭೋಪಾಲ್‌ನ ವ್ಯಕ್ತಿಯೊಬ್ಬನಿಗೆ ಸೋಮವಾರ ಕರೆ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿದೆ.

ಮೋನಿಕಾ ದುಬೆ ಎಂಬವರು ಭೋಪಾಲ್‌ನ ಸಹ್ಯಾದ್ರಿ ಪ್ಯಾರಿಸರ್ ಬಳಿ ಕುಟುಂಬ ಸದಸ್ಯರೊಂದಿಗೆ  ವಾಸಿಸುತ್ತಿದ್ದಾರೆ. ಆಕೆಯ ಸಂಬಂಧಿಗೆ ಲಸಿಕೆ ಹೆಸರಿನಲ್ಲಿ ನಕಲಿ ಕರೆ ಬಂದಿದೆ.

ಭೋಪಾಲ್ ಮೂಲದ ವಿದ್ಯಾರ್ಥಿ ಕೂಡ ಸೈಬರ್ ಸೆಲ್ ಗೆ ಇದೇ ರೀತಿಯ ದೂರು ದಾಖಲಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತ ತಕ್ಷಣ ಕೊರೋನವೈರಸ್ ಲಸಿಕೆಯನ್ನು  ಆದ್ಯತೆಯ ಮೇಲೆ ವಿತರಿಸಲು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ವಿವರಗಳನ್ನು ಕೇಳಿ ಅಪರಿಚಿತ ವ್ಯಕ್ತಿಯೊಬ್ಬ ತಮಗೆ ಫೋನ್ ಕರೆ ಮಾಡಿದ್ದ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇಂತಹ ನಕಲಿ ಕರೆ ಬಂದ ಬಳಿಕ ಎಚ್ಚೆತ್ತುಕೊಂಡಿರುವ ಮಧ್ಯಪ್ರದೇಶದ ಸೈಬರ್ ಸೆಲ್ ,  ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

ಸೈಬರ್ ವಂಚಕರು ಬ್ಯಾಂಕ್ ಖಾತೆ ವಿವರಗಳನ್ನು ಪಡೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ, ಯಾವುದೇ ಒಟಿಪಿ ಅಥವಾ ಇತರ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ ಮತ್ತು ಕೊರೋನವೈರಸ್ ಲಸಿಕೆ ಭರವಸೆ ನೀಡುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಎಂದು ನಾವು ಜನರಿಗೆ ಸಲಹೆ ನೀಡಿದ್ದೇವೆ  ಎಂದು ಸೈಬರ್ ಸೆಲ್ ಎಸ್‌ಪಿ ಡಾ.ಗುರಕರನ್ ಸಿಂಗ್ ಹೇಳಿದ್ದಾರೆ.

ಸುದ್ದಿ ಓದಿ