ವಿಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಗೆಲುವೇ ನಮ್ಮ ಮೊದಲ ಆದ್ಯತೆ
ಲೋಕದರ್ಶನ ವರದಿ
ಅಥಣಿ 18: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು ಅಥಣಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಸದ್ಯದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ ಜೊತೆಗೆ ಪಕ್ಷ ಎರನೇ ಅಭ್ಯರ್ಥಿ ಯಾರೆಂದು ಘೋಶಿಸಬಹುದು ಅಥವಾ ಮಹಾಂತೇಶ ಕವಟಗಿಮಠ ಒಬ್ಬರನ್ನೆ ಅಭ್ಯರ್ಥಿಯನ್ನಾಗಿ ಮಾಡಬಹುದು. ಅಭ್ಯರ್ಥಿ ಯಾರೇ ಆಗಲಿ ನಮ್ಮ ಆದ್ಯತೆ ಮಾತ್ರ ಬಿಜೆಪಿ ಗೆಲ್ಲಿಸುವುದು ಕಾಂಗ್ರೆಸ್ ಸೋಲಿಸುವುದೇ ಆಗಿದೆ ಎಂದ ಅವರು ಜಾರಕಿಹೊಳಿ ಸಹೋದರರು ಸ್ವತಂತ್ರರು ತಮ್ಮ ತಮ್ಮ ರಾಜಕೀಯ ನಿರ್ಧಾರಗಳನ್ನು ತಾವೇ ಮಾಡುತ್ತಾರೆ ಅದರರ್ಥ ಅವರ ವೈಯಕ್ತಿಕ ನಿರ್ಧಾರದಲ್ಲಿ ನಮ್ಮ ಹಸ್ತಕ್ಷೇಪ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡನೇ ಟಿಕೇಟ್ ನನ್ನ ಸಹೋದರ ಲಖನ್ ಜಾರಕಿಹೊಳಿ ಕೇಳಿಲ್ಲ ಅವರ ಪರವಾಗಿ ನಾವ್ಯಾರೂ ಕೇಳಿಲ್ಲ ಆದರೆ ಇತ್ತೀಚಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿಗೆ ಎರಡನೇ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಪಕ್ಷದ ವರಿಷ್ಠರಲ್ಲಿ ಚರ್ಚಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನಾವು ಟಿಕೆಟ್ ಕೇಳಿಯೇ ಇಲ್ಲ ಆದರೂ ಅವರು ಈ ರೀತಿ ಹೇಳಿಕೆ ಹೇಗೆ ನೀಡಿದರು ಎನ್ನುವುದು ನನಗೆ ಗೊತ್ತಿಲ್ಲ ಎಂದ ಅವರು ನನ್ನ ಗುರಿ ಸ್ಪಷ್ಟವಾಗಿದೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಇವರನ್ನು ಗೆಲ್ಲಿಸುವುದೇ ಆಗಿದೆ ಎಂದರು.
ಬಿಜೆಪಿ ಹೈ ಕಮಾಂಡಗೆ ನನ್ನನ್ನು ಮಂತ್ರಿ ಮಾಡಿ ಎಂದು ಇದುವರೆಗೂ ಆಗ್ರಹಿಸಿಲ್ಲ ಅವರು ಯಾವಾಗ ಬೇಕಾದರೂ ನನ್ನನ್ನು ಮಂತ್ರಿ ಮಾಡಲಿ ಆ ವಿಷಯದಲ್ಲಿ ನಾನು ಇಲ್ಲಿಯವರೆಗೂ ತಲೆ ಕೆೆಡಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಅನೇಕ ಕಾಂಗ್ರೆಸ್ ಮುಖಂಡರು ನನಗೆ ಸ್ನೇಹಿತರು ಅವರ ಭೇಟಿ ಮಾಡಿದ್ದಕ್ಕೆ ಅಪಾರ್ಥ ಬೇಡ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅರ್ಷದ ಗದ್ಯಾಳ, ಅಮೂಲ ನಾಯಿಕ, ನಿಂಗಪ್ಪ ನಂದೇಶ್ವರ, ಈಶ್ವರ ಕುಂಬಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.