ವಿ.ಡಿ. ಪಾಟೀಲ ನಿಧನ
ಲೋಕದರ್ಶನ ವರದಿ
ಬ್ಯಾಡಗಿ 17: ಇತ್ತೀಚೆಗೆ ನಿಧನರಾದ ಕವಿವಿ ಪಬ್ಲಿಕ್ ಸ್ಕೂಲ್ ದೈಹಿಕ ನಿರ್ದೇಶಕರೂ ಅಗಿದ್ದ ಕಬಡ್ಡಿ ತರಬೇತುದಾರ ವಿ.ಡಿ. ಪಾಟೀಲ ನಿಧನಕ್ಕೆ ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.
ಮೃತ ವಿ.ಡಿ.ಪಾಟೀಲ ಭಾರತೀಯ ಮಣ್ಣಿನ ಆಟ ಕಬಡ್ಡಿ ಕ್ರೀಡೆಯನ್ನು ರಾಜ್ಯಾದ್ಯಂತ ಹೆಚ್ಚು ಬೆಳಕಿಗೆ ತರುವಲ್ಲಿ ಶ್ರಮ ವಹಿಸಿದ್ದಾರೆ, ಕವಿವಿ ಪುರುಷರ ಮತ್ತು ಮಹಿಳಾ ಕಬಡ್ಡಿ ತಂಡಗಳಿಗೆ ನಿರಂತರ ತರಬೇತಿ ನೀಡುವ ಮೂಲಕ ವಿವಿಧ ಹಂತಗಳಲ್ಲಿ ತಂಡವನ್ನು ಕೊಂಡೊಯ್ಯುವ ಮೂಲಕ ಕವಿವಿ ಹೆಸರನ್ನು ಉತ್ತುಂಗಕ್ಕೆ ಹೆಚ್ಚಿಸಲು ಶ್ರಮಿಸಿದವರಲ್ಲಿ ಪ್ರಮು ಖರಾಗಿದ್ದರು. ಕಬಡ್ಡಿ ಜೊತೆಗೆ ಖೋಖೋ ಮತ್ತು ಅಟ್ಯಾಪಾಟ್ಯಾ ಕ್ರೀಡೆಗಳನ್ನು ತರಬೇತಿ ನೀಡುವಲ್ಲಿ ಪರಣಿತಿ ಹೊಂ ದಿದ್ದ ಪಾಟೀಲ ಸಾಕಷ್ಟು ಕ್ರೀಡಾಪಟುಗಳಿಗೆ ತರಬೇತಿ ನೀಡುವ ಮೂಲಕ ಬದುಕಿನ ಮಾರ್ಗವನ್ನು ತೋರಿಸಿದವರಲ್ಲಿ ಪ್ರಮುಖರಾಗಿದ್ದಾರೆ