ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿ: ಮನಗೂಳಿ
ತಾಳಿಕೋಟಿ10: ರೈತರನ್ನು ಆರ್ಥಿಕವಾಗಿ ಸಧೃಢಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ ಅವುಗಳನ್ನು ಸದುಪಯೊಗ ಪಡಿಸಿಕೊಳ್ಳುವ ಕೆಲಸವನ್ನು ರೈತರು ಮಾಡಬೇಕಾಗಿದೆ ಎಂದು ಕೃಷಿ ನಿರ್ದೇಶಕ ರೇವಣಪ್ಪ ಮನಗೂಳಿ ತಿಳಿಸಿದರು.
ಇತ್ತೀಚಿಗೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ ಸ್ಪಿಂಕ್ಲರ ಪೈಪಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಭಾಗದ ಶಾಸಕರು ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ನೀರಾವರಿಗೆ ಅನುಕೂಲ ಮಾಡಿಕೊಟ್ಟಿದ್ದಾರ.ೆ ಸದರಿ ಸ್ಪಿಂಕ್ಲರ್ ಪೈಪಗಳ ಮೂಲಕ ಜಮೀನುಗಳಿಗೆ ನೀರು ಹರಿಸಲು ತುಂಬಾ ಅನಕೂಲವಾಗುತ್ತದೆ. ರೈತರು ಸಾಂಪ್ರದಾಯಿಕ ಬೆಳೆಗಳಿಗಿಂತಲು ವಾಣಿಜ್ಯ ಬೆಳೆಗಳಿಗೆ ಮಹತ್ವಕೊಡುವ ಅಗತ್ಯ ವಿದೆ. ರೈತರು ಕೃಷಿಯಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳಲು ಬಯಸಿದರೆ ಅವರಿಗೆ ವಿಶೇಷ ತರಬೇತಿಗಾಗಿ ಕಳಿಸಿಕೊಡಲಾಗುವುದು ಎಂದರು.
ವಿನೂತನವಾಗಿ ಆರಂಭಿಸುತ್ತಿರುವ ರೈತ ಸಂಜೀವಿನಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ತಾ. ಪಂ. ಕಾರ್ಯನಿರ್ವಾಹಣಾಧಿಕಾರಿ ಬಸವಂತ್ರಾಯಗೌಡ ಬಿರಾದಾರ ಮಾತನಾಡಿ ರೈತರಿಗೆ ಹಾಗೂ ವ್ಯವಸಾಯಕ್ಕೆ ಸಂಬಂಧಿಸಿದ ಸಮಸ್ಯಗಳನ್ನು ಶೀಘ್ರವಾಗಿ ಸ್ಥಳದಲ್ಲಿಯೇ ಪರಿಹರೀಸಲು ಇಲಾಖೆ ಈ ವಾಹನವನ್ನು ಆರಂಭಿಸುತ್ತಿದೆ. ಇದಕ್ಕೆ 155313 ಟೋಲ ಫ್ರೀ ಸಂಖ್ಯೆ ನೀಡಲಾಗಿದೆ ಇದನ್ನು ಬಳಸಿ ರೈತರು ತಮ್ಮ ಸಮಸ್ಯಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ಅವರು ರೈತರಿಗೆ ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದಾಗುವ ದುಶ್ಪರಿಣಾಮಗಳನ್ನು ತಿಳಿಸಿ ಸಾವಯವ ಕೃಷಿಯ ಮಹತ್ವ ಹಾಗೂ ಅದರ ಸದುಪಯೋಗದ ಕುರಿತು ಮಾರ್ಗದರ್ಶನ ನೀಡಿದರು.
ರೈತ ಮುಖಂಡ ರಾಮನಗೌಡ ಡೋರ್ನಹಳ್ಳಿ ಮಾತನಾಡಿದರು. ರೈತರಾದ ಭೀಮನಗೌಡ ತಂಗಡಗಿ, ಬಸವಂತ್ರಾಯ ಕುಂಟರೆಡ್ಡಿ, ಅಬ್ದುಲ್ರಜಾಕ್ ಮಮದಾಪೂರ, ರಾಮನಗೌಡ ನೀರಲಗಿ, ದೇವಿಂದ್ರ ಬಿರಾದಾರ, ಮಲ್ಲನಗೌಡ ಯಾದಗಿರಿ, ಶರಣಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಕೃಷಿ ಅಧಿಕಾರ ಮಹೆಬೂಬ ಎಚ್. ಬೀಳಗಿ, ಸಹಾಯಕ ಕೃಷಿ ಅಧಿಖಾರಿ ಎಸ್.ಬಿ. ಪಾಲ್ಕಿ, ಎಸ್ ಜಿ ಬಿರಾದಾರ, ಎಸ್ ಆರ್ ಮೂಲಿಮಾನಿ, ವಿಸ್ತರಣಾಧಿಕಾರಿ, ಎಸ್. ಬಿ. ಪಾಟೀಲ, ಅಕೌಂಟಂಟ್ ವಿನೋದ ನಾಯಕ, ಅಮರೇಶ ಅಂಗಡಿ, ನಂದಿಕೋಲಮಠ, ರವಿ ಹೊಸಮನಿ ಉಪಸ್ಥತರಿದ್ದರು.