ಯರಗಟ್ಟಿ

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ: ವಾಲಿ

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ: ವಾಲಿ

ಯರಗಟ್ಟಿ 22: ಪೋಷಣ ಮಾಸಾಚರಣೆಯ ಅಂಶಗಳು ಇವತ್ತಷ್ಟೆ ಇರದೇ, ಅವುಗಳನ್ನು ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಸರಕಾರದ ಯೋಜನೆಗಳನ್ನು ಸಮರ​‍್ಕವಾಗಿ ಬಳಸಿಕೊಳ್ಳಬೇಕೆಂದು ಗುರು ವಾಲಿ ಕರೆ ನೀಡಿದರು. 

ರಾಷ್ಟ್ರೀಯ ಪೋಷಣ ಮಾಸಾಚರಣೆ ಅಂಗವಾಗಿ ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಏರಿ​‍್ಡಸಲಾಗಿದ್ದ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ, ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ಕಾರ‌್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್ ಗಂಜಿ ಪ್ರಾಸ್ತಾವಿಕವಾಗಿ ಮಾತನಾಡಿ ಗರ್ಭದಿಂದ ಗೋರಿಯವರೆಗೆ ಆರೋಗ್ಯ ಇಲಾಖೆಯ ಸೇವೆಗಳಿವೆ, ಗರ್ಭಿಣಿಯರು ಕನಿಷ್ಟ ಪಕ್ಷ 3 ಸಲ ವೈದ್ಯರಿಂದ ಆರೋಗ್ಯ ತಪಸಣೆ ಮಾಡಿಸುವದು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವದು ಹಾಗೂ  ಮಗುವಿನ ಆರೋಗ್ಯ ತಪಾಸಣೆ, ಲಸಿಕೆ ಹಾಕಿಸುವದು, ಹುಟ್ಟಿದ ಅರ್ಧಗಂಟೆಯೊಳಗೆ ಎದೆ ಹಾಲು ಕುಡಿಸುವದು, ಮಕ್ಕಳ ನಡುವೆ ಅಂತರ ಇಡುವದರಿಂದ ತಾಯಂದಿರ ಮರಣ ಮತ್ತು ಶಿಶುಮರಣ ತಪ್ಪಿಸಬಹುದು.  

ಗರ್ಭಿಣಿಯರು, ಬಾಣಂತಿಯರು, ಹಾಗೂ ಮಕ್ಕಳಿಗೆ ಅಪೌಷ್ಟಿಕತೆ ಆಗುವ ಸಾಧ್ಯತೆ ಇರುವದು, ಇದಕ್ಕೆ ಬಡತನ, ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆ, ಸಂಪ್ರದಾಯ, ಮತ್ತು ಜನಸಂಖ್ಯಾ ಹೆಚ್ಚಳ ಕಾರಣಗಳಾಗಿವೆ, ಆದ್ದರಿಂದ ಇವರು ಸ್ಥಳಿಯವಾಗಿ ಸಿಗುವ ಹಸಿರು ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಬಳಸುವದು ವೈದ್ಯರಿಂದ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುವದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.  

ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಕೊರತೆ, ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡುವದು ಅಪೌಷ್ಟಿಕತೆಗೆ ಕಾರಣವಾಗಿದೆ. ಇದು ಹೆಚ್ಚಾಗಿ ಮಕ್ಕಳು, ಗರ್ಭಿಣಿ, ಬಾಣಂತಿಯರಲ್ಲಿ ಕಂಡುಬರುತ್ತಿದೆ, 6 ವರ್ಷದೊಳಗಿನ ಮಕ್ಕಳಲ್ಲಿ, ಗರ್ಭಿಣಿ, ಹಾಲುಣಿಸುವ ತಾಯಂದಿರಲ್ಲಿ ಹದಿಹರೆಯದವರಲ್ಲಿ ಅಪೌಷ್ಟಿಕತೆಯಲ್ಲಿ ಬದಲಾವಣೆ ತರುವದು ಕಾರ‌್ಯಕ್ರಮದ ಗುರಿಯಾಗಿದೆ. ಆದ್ದರಿಂದ ಈ ತಿಂಗಳದ ದಿವಸಗಳಲ್ಲಿ ಪ್ರತ್ಯೇಕವಾದ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದನ್ನು ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವದಾಗಿದೆ ಎಂದು ಎಸಿಡಿಪಿಓ ರೇಣುಕಾ ಕರಿಮೂಡಿ ಹೇಳಿದರು. 

ನವಜಾತ ಶಿಶುಗಳು ಹೆರಿಗೆಯಾದ ಒಂದು ಗಂಟೆಯೋಳಗೆ ತಾಯಿಯ ಎದೆ ಹಾಲು ಕುಡಿಸುವದು,  2ವರ್ಷದಿಂದ ತಾಯಿಯ ಎದೆ ಹಾಲನ್ನು ಮುಂದುವರೆಸಿ ಮೆದುವಾದ ಪೌಷ್ಠಿಕ ಪೂರಕ ಆಹಾರವನ್ನು ಕೊಡುವದು, ಹದಿಹರೆಯದವರಿಗೆ ಹೆಚ್ಚಿನ ಆಹಾರದ ಅವಶ್ಯಕತೆ ಇದ್ದು ಸಮತೋಲನ ಆಹಾರವನ್ನು ಸೇವಿಸುವದಾಗಿದೆ, ಗರ್ಭಿಣಿಯರು, ಬಾಣಂತಿಯರು ಅಧಿಕ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಿದಾಗ ಮಗುವಿಗೆ ಸಾಕಷ್ಠು ತಾಯಿಯ ಹಾಲು ಸಿಗುವದು.  ಮಕ್ಕಳ ಆರೋಗ್ಯ ಕಾಪಾಡಲು ಗರ್ಭಪೂರ್ವ ತಯಾರಿ ಕಾಂಗರೂ ಕೇರ್ ವಿಧಾನ, ಮನೆ ಮಟ್ಟದಲ್ಲಿ ಮಕ್ಕಳ ಆರೈಕೆ ಓಆರ್‌ಎಸ್ ಮತ್ತು ಜಿಂಕ ಮಾತ್ರೆಯ ಬಳಕೆ ಅತೀ ಅವಶ್ಯಕವಾಗಿದೆ ಎಂದು  ಆರೋಗ್ಯ ನಿರಿಕ್ಷಣಾಧಿಕಾರಿ ಉಮೇಶ ಬೆಟಗೇರಿ  ಹೇಳಿದರು. 

ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಮತ್ತು ಅಭಾ ಕಾರ್ಡ ಕುರಿತು ಆರೋಗ್ಯ ಮಿತ್ರರಾದ ಅಶೋಕ ನೀಲನ್ನವರ ಮಾಹಿತಿ ನೀಡಿದರು.  

ಕಾರ‌್ಯಕ್ರಮವನ್ನು  ಅಂಗನವಾಡಿ ಮೆಲ್ವಿಚಾರಕಿಯರಾದ ವಾಸಂತಿ ಹಿರೇಮಠ, ಶೋಭಾ ಹುನಸಿಕಟ್ಟಿ ನೆರವೆರಿಸಿಕೊಟ್ಟರು. ಗ್ರಾಮ ಪಂಚಾಯತ ಸದಸ್ಯರುಗಳಾದ  ಗೌಡಪ್ಪಾ ಸವದತ್ತಿ, ಲಕ್ಷ್ಮವ್ವಾ ನಾಗಣ್ನವರ, ಶಾಂತವ್ವಾ  ಪಾಟೀಲ, ಪಿಡಿಓ ಎಂ. ಎನ್‌. ಹಾರೂಗೊಪ್ಪ ಆರೋಗ್ಯ ಇಲಾಖೆಯ ಅಶೋಕ ನೀಲನ್ನವರ, ಉಮೇಶ ಬೇಟಗೇರಿ, ಜಿ. ಎಸ್‌. ಹಂಚಿನಮನಿ  ಆಗಮಿಸಿದ್ದರು.  

ಅಂಗನವಾಡಿ ಕಾರ‌್ಯಕರ್ತೆಯರು,  ತಾಯಿಂದಿರು ಆಶಾ ಕಾರ‌್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.  

ನಾಜಮಿನ್ ಸನದಿ ನಿರೂಪಿಸಿ, ಭಾರತಿ ಮಠದ ಸ್ವಾಗತಿಸಿ ಜಯಶ್ರೀ ತುಪ್ಪದ ವಂದಿಸಿದರು. 


ಸುದ್ದಿ ಓದಿ