ಸಂಕೇಶ್ವರ

ದಿ. ಮಲ್ಹಾರಿಗೌಡ ಪಾಟೀಲರ ಪ್ರತಿಮೆ ಅನಾವರಣ

ದಿ. ಮಲ್ಹಾರಿಗೌಡ ಪಾಟೀಲರ ಪ್ರತಿಮೆ ಅನಾವರಣ

ಲೋಕದರ್ಶನ ವರದಿ 


ಸಂಕೇಶ್ವರ 19: ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ ದಿವಂಗತ. ಮಲ್ಹಾರಿಗೌಡ  ಶಂ. ಪಾಟೀಲರ ಸಂಸ್ಥಾಪಕ  ದಿನಾಚರಣೆ ಹಾಗೂ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಸೋಮವಾರ  ದಿ. 21 ರಂದು ಕಾರ್ಯಕ್ರಮ ಏರಿ​‍್ಡಸಲಾಗಿದೆ ಎಂದು ಆದ್ಯ ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆ ಚೇರಮನ ಹಾಗೂ ಹಿಡಕಲ ಡ್ಯಾಮ ಸಂಗಮ ಶುಗರ್ ಕಾರ್ಖಾನೆಯ ಚೇರಮನ ರಾಜೇಂದ್ರ ಪಾಟೀಲ ಅವರು ಹೇಳಿದರು. 

ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ದುರದುಂಡೀಶ್ವರ ಮತ್ತು ನಿಜಲಿಂಗೇಶ್ವರ ಮಹಾಸ್ವಾಮಿಗಳ ಹಾಗೂ ಶಿವಲಿಂಗೇಶ್ವರ ಮಹಾಸ್ವಾಮಿಗಳ  ಇವರ ಆಶಿರ್ವಾದದಲ್ಲಿ ಶಿಕ್ಷಣ ಸಂಸ್ಥೆಯು 1991ರಲ್ಲಿ ಆರಂಭಗೊಂಡಿತ್ತು. ಕರ್ನಾಟಕ ಮತ್ತು ಮಹರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನೂಕುಲವಾಗುವ ಸಲುವಾಗಿ  ಉನ್ನತ ಮತ್ತು ವೃತಿಪರ ಶಿಕ್ಷಣ ಒದಗಿಸುವ  ಉದ್ದೇಶ ಬಡವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ  ಮಲ್ಹಾರಿಗೌಡ  ಶಂ. ಪಾಟೀಲರು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಇದರಲ್ಲಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಲಾಯಿತು. ಅನಂತ ವಿದ್ಯಾನಗರ ಬಡಾವಣೆಯಲ್ಲಿ ದಿ. ಸಂಜಯ ಪಾಟೀಲ  ಫಾರ್ಮಸಿ ಮಹಾವಿದ್ಯಾಲಯ ಆರಂಭಗೊಂಡಿತು. ಶ್ರೀಮತಿ ಬೇರಿಯಲ್ ಬಿಡೇ ಹಾಗೂ ಕುಟುಂಬದ ವರ್ಗದವರು ತುಂಬಾ ಬೆಲೆ ಬಾಳುವ  ಸುಮಾರು 6 ಎಕರೆ 26 ಗುಂಟೆಯಷ್ಟಿರುವ ಈ ಖುಲ್ಲಾ ಭೂಮಿಯನ್ನು ದಾನವಾಗಿ ನೀಡಿದರು. ಇಂದು ಅವರ ದಾನವಾಗಿ ನೀಡಿದ  ಜಾಗೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ತಲೆಯೆತ್ತಿವೆ. ಇದಕ್ಕೆಲ್ಲಾ ಕಾರಣ ಮಲ್ಹಾರಿಗೌಡ ಶಂ. ಪಾಟೀಲರ ಅವಿರತ ಪ್ರಯತ್ನ ಎಂದು ಹೇಳಲಾಗುತ್ತದೆ.  

ರಾಜೇಂದ್ರ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ದಿವ್ಯ ಸಾನಿದ್ಯವನ್ನು  ಶಂಕರಾಚಾರ್ಯ ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತೀ ಮಹಾಸ್ವಾಮಿಗಳು ವಹಿಸುವರು. ಸಮಾರಂಭದಲ್ಲಿ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ವಿರಕ್ತಮಠಶೇಗುಣಸಿ, ಮುಖ್ಯ ಅತಿಥಿಗಳಾಗಿ ಮುಜರಾಯಿ ಹಜ್ ಮತ್ತು ವಕ್ಫ್‌ ಸಚಿವರು ಶಶಿಕಲಾ ಅ. ಜೊಲ್ಲೆ, ಬಾಗಲಕೋಟಿಯ ಶಾಸಕ ಡಾ.ವೀರಣ್ಣ ಸಿ. ಚರಂತಿಮಠ, ಬಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ರಮೇಶ ವ್ಹಿ. ಕತ್ತಿ, ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಮಾಜಿ ವಿಧಾನ ಪರಿಷತ್ತಿನ ಸದಸ್ಯ ಮಹಾಂತೇಶ ಮ. ಕವಟಗಿಮಠ, ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕುನಾಲ ಸಂಜಯ ಪಾಟೀಲ ಇನ್ನೂಳಿದ ಗಣ್ಯ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ರಾವಸಾಹೇಬ ದೇಸಾಯಿ ಎನ್‌.ಬಿ.ಪಾಟೀಲ ಮಲ್ಲಿಕಾರ್ಜುನ ಸಾರವಾಡಿ ಉಪಸ್ಥಿತರಿದ್ದರು. 


ಸುದ್ದಿ ಓದಿ