ರಂಗೋಲಿಯಲ್ಲಿ ಭೌಗೋಳಿಕ ಮಾದರಿಗಳ ಅನಾವರಣ
ಲೋಕದರ್ಶನ ವರದಿ
ರಾಣೇಬೆನ್ನೂರು 10: ಬಿ.ಜೆ.ಎಂ.ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಗಾಯತ್ರಿ ಆವರಣದ ಭೂಗೋಳಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹೊಸಮನಿ ಸಿದ್ದಪ್ಪ ಪಿ.ಯು. ಕಾಲೇಜಿನ ಭೂಗೋಳಶಾಸ್ತ್ರ ಉಪನ್ಯಾಸಕ ಎಸ್. ಶಿವಾನಂದ ಭಾಗವಹಿಸಿ, ಭೂಗೋಳಶಾಸ್ತ್ರದ ವ್ಯಾಪ್ತಿ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳನ್ನು ರಂಗೋಲಿಯ ಮೂಲಕ ಪ್ರದರ್ಶಿಸುವ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಅತಿಥಿ ಎಚ್.ಎ. ಭಿಕ್ಷಾವರ್ತಿಮಠ ಅವರು ಪರಿಸರ ಸ್ನೇಹಿ ಅಂಶಗಳು ಹಾಗೂ ರಂಗೋಲಿಯಲ್ಲಿ ಮೂಡಿಬಂದ ಭೌಗೋಳಿಕ ಮಾದರಿಗಳ ಕಲಾತ್ಮಕತೆಯ ಕುರಿತು ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಚಂದ್ರಶೇಖರ ಎಂ.ಕೆ. ಅವರು ಭೂಗೋಳಶಾಸ್ತ್ರವು ಎಲ್ಲ ವಿಷಯಗಳಿಗೂ ಆಧಾರವಾಗಿರುವ ಪ್ರಮುಖ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ ಬಣಕಾರ ಅವರು ರಂಗೋಲಿಯ ಮೂಲಕ ಪ್ರಕೃತಿ ಸಂರಕ್ಷಣೆ ಹಾಗೂ ಭೌಗೋಳಿಕ ವಿಷಯಗಳ ಅರಿವು ಮೂಡಿಸುವ ಪ್ರಯತ್ನದ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಾದ ಚೈತ್ರಾ ಸಿ. ಹಾಗೂ ಕವಿತಾ ಜಿ. ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಡಾ. ಪುಷ್ಪಾಂಜಲಿ ಎನ್. ಕಾಂಬಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಾ ತಳವಾರ ನಿರೂಪಿಸಿದರು. ಐಶ್ವರ್ಯ ಕಾಳೇರ್ ಪ್ರಾರ್ಥನಾ ಗೀತೆ ಹಾಡಿದರು. ನಂದಾ ಸಂಗಡಿಗರು ವಂದನಾರೆ್ಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಡಾ. ಸುನೀಲ ಹಿರೇಮನಿ, ಸಂತೋಷ ಭಜಂತ್ರಿ, ಡಾ. ಬಸವರಾಜ ಮಾಳೇನಹಳ್ಳಿ, ಡಾ. ಹನುಮಂತ ಬ್ಯಾಡಗಿ, ಡಾ. ರಾಜೀವ್ ಎಂ.ಕೆ., ಎಸ್.ಎಚ್. ಹುಚ್ಚಗೊಂಡ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.