ಅಪರಿಚಿತ ಯುವತಿ ಶವ ಪತ್ತೆ
ತಾಳಿಕೋಟೆ10: ಸಮೀಪದ ಜಮ್ಮಲದಿನ್ನಿ ಇಣಚಗಲ್ ಕ್ರಾಸ್ ಮಧ್ಯದಲ್ಲಿ ಸೇತುವೆ ಕೆಳಗೆ ಅಪರಿಚಿತ ಯುವತಿ ಶವ ಪತ್ತೆಯಾಗಿದ್ದು ವೇಲ್ನಿಂದ ಗುತ್ತಿಗೆಗೆ ಕಟ್ಟಿ ಸೇತುವೆ ಡಿಕ್ಕಿ ಹೊಡೆಸಿ ಕೊಲೆ ಮಾಡಲಾಗಿದೆ. ತಾಳಿಕೋಟೆ ಹುನಗುಂದ ರಾಜ್ಯ ಹೆದ್ದಾರಿಯಲ್ಲಿ ಇರುವ ಸೇತುವೆ ಕೆಳಗೆ ಶವ ಪತ್ತೆಯಾಗಿದೆ. ಸುಮಾರು 18 ರಿಂದ 20 ವಯಸ್ಸಿನ ಅಪರಿಚಿತ ಯುವತಿ ನೀಲಿ ಬಣ್ಣದ ಟಾಪ್ ಬಿಳಿ ಬಣ್ಣ ಲೆಗ್ಗಿನ್ಸ ಹಾಕಿಕೊಂಡಿರುವ ಯುವತಿಯನ್ನು ವೇಲ್ನ್ನು ಯುವತಿಯ ಕುತ್ತಿಗೆಗೆ ಸುತ್ತಿ, ವೇಲ್ ಹಿಡಿದು ಮುಖವನ್ನು ಸೇತುವೆಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿರುವ ಶಂಕೆಯಿದೆ. ಬುಧವಾರ ಪಕ್ಕದ ಜಮೀನಿಗೆ ಆಗಮಿಸಿದ ಜಮೀನಿನ ಮಾಲೀಕ ಶವವನ್ನು ನೋಡಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿ ಪೊಲೀಸ್ರು ತನಿಖೆಯನ್ನು ಕೈಕೊಂಡಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಿಸಿದ್ದಿ, ಡಿವಾಯ್ಎಸ್ಪಿ ಅರುಣಕುಮಾರ ಕೋಳೂರ, ಸಿಪಿಆಯ್ ಆನಂದ ವಾಗ್ಮೋಡೆ, ಎಸೆಗಳಾ ಎಂ.ಬಿ.ಬಿರಾದಾರ, ವಿನೋಡ ದೊಡ್ಡಮನಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಯುವತಿಯ ಶವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ತಾಳಿಕೋಟೆ ಸಮೀಪದ ಜಮ್ಮಲದಿನ್ನಿ ಕ್ರಾಸ್ ಬಳಿ ಅಪರಿಚಿತ ಯುವತಿಯ ಶವ ಪತ್ತೆಯಾದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು