ಇಂಡಿ

ಪುನರ್ ಮನನ್ ತರಬೇತಿಗೆ ಆರೋಗ್ಯ ಅಧಿಕಾರಿ ಡಾ. ಕೆ.ಡಿ.ಗುಂಡಬಾವಡಿ ಉದ್ಘಾಟನೆ

ಪುನರ್ ಮನನ್ ತರಬೇತಿಗೆ ಆರೋಗ್ಯ ಅಧಿಕಾರಿ ಡಾ. ಕೆ.ಡಿ.ಗುಂಡಬಾವಡಿ ಉದ್ಘಾಟನೆ

ಇಂಡಿ: 16 ವರ್ಷದ ಒಳಗಿನ ಮಕ್ಕಳಿಗೆ ಉಂಟಾಗಬಹುದಾದ ಮಾರಕ ರೋಗಗಳ ವಿರುದ್ಧ ಲಸಿಕೆಯಿಂದ ವಂಚಿತ ಮಕ್ಕಳು ಮತ್ತು ಗರ್ಭಿಣಿಯರನ್ನು ಬೇಗನೆ ಕಂಡುಹಿಡಿದು ಅಂತವರಿಗೆ ಕಡ್ಡಾಯವಾಗಿ ಲಸಿಕೆಯನ್ನು ಹಾಕಲೇಬೇಕು ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಕೆ.ಡಿ.ಗುಂಡಬಾವಡಿ ಹೇಳಿದರು. 

ಅವರು ಶನಿವಾರ ಪಟ್ಟಣದ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಪುನರ್ ಮನನ್ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಂಡಾ ಮತ್ತು ತೋಟದ ವಸ್ತಿಯಲ್ಲಿ ಇದ್ದ ಫಲಾನುಭವಿಗಳಿಗೆ ಹೆಚ್ಚು ಆದ್ಯತೆಯನ್ನು ಕೊಡಬೇಕು. ಗ್ರಾಮದಲ್ಲಿನ ಗ್ರಾ ಪಂ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಸಮಗ್ರ ಮಾಹಿತಿ ಪಡೆದುಕೊಂಡು ಒಬ್ಬರನ್ನೂ ಬಿಡದೆ ಲಸಿಕೆ ಹಾಕಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಮುಕುಂದ ಗಲಗಲಿ ಎಸ್‌.ಎಮ್‌.ಓ (ಡಬ್ಲ್ಯು.ಎಚ್‌.ಓ) ತಾಲೂಕಾ ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ, ತಾಲ್ಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಸೇರಿದಂತೆ ಅನೇಕರು ಇದ್ದರು. 

ಸುದ್ದಿ ಓದಿ