ಶಿಗ್ಗಾವ್

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಶಿಗ್ಗಾವಿ 25: ಹುಟ್ಟು ಹಬ್ಬಗಳು ನಿಮಿತ್ಯ ಮಾತ್ರ ಆದರೆ ಆ ಹುಟ್ಟು ಹಬ್ಬಗಳ ಪ್ರಯುಕ್ತ ಹಮ್ಮಿಕೊಳ್ಳುವ ಸಮಾಜಿಕ ಕಳಕಳಿಯ ಸೇವಾ ಕಾರ್ಯಗಳು ಇನ್ನೊಬ್ಬರಿಗೆ ಪ್ರೇರಣೆಯ ಜೊತೆಗೆ ಅರ್ಥಪೂರ್ಣ ಕಾರ್ಯಕ್ರಮವಾಗಲು ಸಾಧ್ಯವಾಗುತ್ತವೆ ಎಂದು ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ತಾಲೂಕಿನ ಗಂಗೇಬಾವಿಯ ಕೆಎಸ್‌ಆರ್‌ಪಿ 10 ನೇ ಪಡೆಯಲ್ಲಿ ವಾಲ್ಮೀಕಿ ಸೇವಾ ಟ್ರಷ್ಟ್‌ ವತಿಯಿಂದ 23 ನೇ ವಾರ್ಡಿನ ಪುರಸಭೆ ಸದಸ್ಯೆ ಸಂಗೀತಾ ವಾಲ್ಮೀಕಿ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಟ್ಟು ಹಬ್ಬದ ಅಂಗವಾಗಿ ಸಮವಸ್ತ್ರ ವಿತರಿಸುತ್ತಿರುವ ವಾಲ್ಮೀಕಿಯವರ ಕಾರ್ಯ ಶ್ಲಾಘನೀಯವಾದದ್ದು, ಸಾವು ಬರುವದರೊಳಗೆ ಸಾಧನೆ ಮಾಡಬೇಕು, ಪ್ರೀತಿ, ವಾತ್ಸಲ್ಯ, ಮಮತೆಯಿಂದ ಬಾಳಬೇಕು, ಸಂಗೀತಾ ವಾಲ್ಮೀಕಿ ಯವರು ಸ್ಪೂರ್ತಿ ದಾಯಕ ಕೆಲಸ ಮಾಡುತ್ತಿದ್ದಾರೆ ಎಂದರು. 

ಸಹಾಯಕ ಕಮಾಂಡೆಂಟ್ ದಾವಲ್ ಸಾಬ್ ಹಾವೇರಿ ಮಾತನಾಡಿ ವಾರ್ಡಿನ ಅಭಿವೃದ್ದಿ ಜೊತೆಗೆ ಇಂದು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುತ್ತಿರುವದು ಒಳ್ಳೆಯ ಕಳಕಳಿಯ ಕಾರ್ಯ ಎಂದರು. 

ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ ಮಾತನಾಡಿ ಸಂಗೀತ ವಾಲ್ಮೀಕಿ ಅವರು ಪ್ರೋತ್ಸಾಹ ದಾಯಕವಾಗಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂದರು. 

ಪುರಸಭೆ ಸದಸ್ಯೆ ಸಂಗೀತ ವಾಲ್ಮೀಕಿ ಮಾತನಾಡಿ, ಆರೊಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದ್ದು, ಮಕ್ಕಳ ಶಿಕ್ಷಣಕ್ಕೆ ಬದ್ರ ಬುನಾದಿ ಅಂಗನಾಡಿ ಶಿಕ್ಷಣವಾಗಿದ್ದು ಆ ಮಕ್ಕಳಿಗೆ ಸಮವಸ್ತ್ರ ವಿತರಿಸುತ್ತಿರುವುದು ಸಂತಸ ತಂದಿದೆ ಎಂದರು.  

ರಾಜಶೇಖರ ಪಾಟೀಲ, ನಾಗಪ್ಪ ಪಾರ್ವತಿ, ಗೋವಿಂದಪ್ಪ ವಾಲ್ಮೀಕಿ, ನಿರ್ಮಲಾ ಇಟಗಿ ಸೇರಿದಂತೆ ಅಂಗನವಾಡಿ ಶಿಕ್ಷಕಿಯರು ಹಾಗೂ ಸಿಬ್ಬಂದಿಗಳು ಹಾಗೂ ಗಂಗೇಬಾವಿಯ ಕೆಎಸ್‌ಆರ್‌ಪಿ 10 ನೇ ಪಡೆಯ ಸಿಬ್ಬಂದಿಗಳು, ವಾಲ್ಮೀಕಿ ಸೇವಾ ಟ್ರಷ್ಟ್‌ನ ಸದಸ್ಯರು ಇದ್ದರು. 


ಸುದ್ದಿ ಓದಿ