ಶಿಗ್ಗಾವ್

ಅನಾವೃಷ್ಟಿಯಿಂದ ರೈತರು ಬೆಳೆ ನಾಶ: ಪರಿಹಾರಕ್ಕೆ ಒತ್ತಾಯ

ಅನಾವೃಷ್ಟಿಯಿಂದ ರೈತರು ಬೆಳೆ ನಾಶ: ಪರಿಹಾರಕ್ಕೆ ಒತ್ತಾಯ


ಲೋಕದರ್ಶನ ವರದಿ 

ಶಿಗ್ಗಾವಿ 21: ಕಳೆದ 3-4 ದಿನಗಳಿಂದ  ತಾಲೂಕಿನಾದ್ಯಂತ ದಿನಂಪೂರ್ತಿ ವರುಣನ ಆರ್ಭಟನೆ ನಡೆದು ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬೇಟಿ ನೀಡಿ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಾ.ಹ.ಅ ಹಾಗೂ ಭ್ರ.ನಿ.ಸಮೀತಿಯ ತಾಲೂಕಾ ಅಧ್ಯಕ್ಷ ಮಂಜುನಾಥ ಹಾವೇರಿ ಸರ್ಕಾರಕ್ಕೆ ಒತ್ತಾಯಿಸಿದರು.  

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸದ್ಯದ ಪರಿಸ್ಥಿತಿಯಲ್ಲಿ ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳಿಯವಾಗಿ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಸ್ಪಂದಿಸಿ ಸಂಕಷ್ಟಕ್ಕೆ ಸಿಲುಕಿದ ರೈತರ ಹೊಲಗಳಿಗೆ ಹೋಗಿ ಪರೀಶೀಲಿಸಿ ಹಾನಿಯ ಪ್ರಮಾಣವನ್ನು ತಕ್ಷಣದಲ್ಲಿ ದಾಖಲಿಸಿ ಶೀಘ್ರ ಪರಿಹಾರಕ್ಕೆ ಮುಂದಾಗಬೇಕು. ಮತ್ತು ಇದೇ ಕ್ಷೇತ್ರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರಿಗಳಿಗ ಸೂಕ್ತವಾಗಿ ಕಾರ್ಯನಿರ್ವಹಿಸಲು ಸೂಚಿಸಬೇಕು ಎಂದರು.  

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾದ್ಯಕ್ಷ ಮುತ್ತಣ್ಣ ಗುಡಗೇರಿ ಮಾತನಾಡಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ರೈತರು ಕೈಗೆ ಬಂದ ಬೆಳೆಗಳನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ ಇಂತಹ ಸಮಯದಲ್ಲಿ ಕ್ಷೇತ್ರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಕ್ರಮ ಜರೂಗಿಸಲು, ಅಧಿಕಾರಿ ವರ್ಗದವರು ದಾಖಲಾತಿಗಾಗಿ ರೈತರನ್ನ ಅಲೆದಾಡಿಸದೇ ಶಿಘ್ರವಾಗಿ ಪರಿಹಾರಕ್ಕೆ ಮುಂದಾಗಬೇಕು. ರೈತ ಕುಲ ಸಂಕಷ್ಟದಲ್ಲಿ ಸಿಲುಕಿದೆ ಈ ಸಮಯದಲ್ಲಿ ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವಂತ ಕಾರ್ಯಗಳು ಆಗಬೇಕು ಎಂದರು.  

ಸುದ್ದಿಗೋಷ್ಠಿಯಲ್ಲಿ ಹಸಿರು ಸೇನೆ ತಾಲೂಕಾ ಉಪಾದ್ಯಕ್ಷ ಶಂಕರಗೌಡ ಪಾಟೀಲ, ರೈತ ಮುಖಂಡರಾದ ಪಂಚಯ್ಯ ಹಿರೇಮಠ, ನಾಗಪ್ಪ ಕೊಟ್ಟಣದ, ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ