ಶಿಗ್ಗಾವ್

ಅವಿರೋಧವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

ಅವಿರೋಧವಾಗಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

ಶಿಗ್ಗಾವಿ 05: ತಾಲೂಕಿನ ಹನುಮರಹಳ್ಳಿ ಗ್ರಾಮ ಪಂಚಾಯತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 30 ತಿಂಗಳ ಮೊದಲನೇ ಅವಧಿಗೆ ಬಿಜೆಪಿ ಬೆಂಬಲಿತ ನೀಲವ್ವ ಶಿವಪ್ಪ ಆಡಿನ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕುಸುಮವ್ವ ಮಾಲಿಂಗನಗೌಡ ಪಾಟೀಲ ಅವರುಗಳು ಅವಿರೋಧವಾಗಿ ಆಯ್ಕೆಯಾದರು. 

ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಒಟ್ಟಾಗಿದ್ದರಿಂದ ಯಾವುದೇ ಚುನಾವಣೆಯು ನಡೆಯದಂತೆ ನೋಡಿಕೊಂಡು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಯಾದರು ಎಂದು ತಿಳಿದು ಬಂದಿದ್ದು ಒಟ್ಟು 9 ಸದಸ್ಯಬಲ ಹೊಂದಿದ ಹನುಮರಹಳ್ಳಿ ಗ್ರಾಪಂನಲ್ಲಿ 8 ಜನ ಬಿಜೆಪಿ ಬೆಂಬಲಿಗರಿಂದ ಒಬ್ಬರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ ಆದ್ದರಿಂದ ಈ 8 ಜನ ಬೆಂಬಲಿಗರೊಂದಿಗೆ ನಾಮ ಪತ್ರಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳೇ ಜಯಶಾಲಿಯಾದರು. 

ನಂತರ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಬಿಜೆಪಿ ತಾಲೂಕಾದ್ಯಕ್ಷ ಶಿವಾನಂದ ಮ್ಯಾಗೇರಿ ಹಾಗೂ ಪ್ರಧಾನ ಕಾರ್ಯದರ್ಶಿ ರೇಣುಕನಗೌಡ ಪಾಟೀಲ, ಮುಖಂಡ ವಿರೇಶ ಆಜೂರ, ವಿಠಲ ಮೊತೆನವರ, ಮಲ್ಲಿಕಾರ್ಜುನ ಪಾಟೀಲ, ಶಿದ್ದು ಆಡಿನ, ರಾಜು ದೊಡ್ಡಮನಿ, ಚಂದ್ರಶೇಖರ ಗಂಜೀಗಟ್ಟಿ, ನಾಗಪ್ಪ ತುಪ್ಪದ, ಮಾರುತಿ ಯಂಕಣ್ಣವರ, ಪೋಲಿಸ ಬಗಾಡೆ ಸೇರಿದಂತೆ ಅಪಾರ ಬಿಜೆಪಿ ಬೆಂಬಲಿಗರು ಅಭಿನಂದಿಸಿದರು. 


ಸುದ್ದಿ ಓದಿ