ತಂಬಾ

ಬೇನಕನಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬೇನಕನಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ತಾಂಬಾ 11: ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಶೀನಾಥ ಹಚಡದ, ಉಪಾಧ್ಯಕ್ಷರಾಗಿ ಭೀರಪ್ಪ ಚಾಕರಿ ಅವಿರೋಧವಾಗಿ ಆಯ್ಕೆ ಆದರು.

ಚುನಾವಣೆ ಅಧಿಕಾರಿಯಾದ ಸಹಾಯಕ ನಿದೇರ್ಶಕ ಪಶು ಸಂಗೋಪನಾ ಇಲಾಖೆ ಉಪವಿಭಾಗ ಇಂಡಿಯ  ಡಾ: ಎಸ್. ಪಿ. ಕುಂಬಾರ ಕಾರ್ಯನಿರ್ವಹಿಸಿದರು.

ಕೆಂಗನಾಳ, ಶಿರಕನಹಳ್ಳಿ, ಶಿವಪೂರ, ಬೇನಕನಹಳ್ಳಿ ನಾಲ್ಕು ಗ್ರಾಮದ ಹೀರಿಯರು ಹಾಗೂ ಯುವಕರು ಸೇರಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಶ್ರೀಮಂತ ಲೋಣಿ, ಆರ್. ಬಿ. ಹೊಸಮನಿ, ಎಂ.ಎಸ್. ಪುಜಾರಿ, ಸಿ.ಆರ್. ಮಸಳಿ, ಯಲ್ಲಪ್ಪ ನಾಯ್ಕೊಡಿ, ಉಮೇಶ ಕಟ್ಟಿ, ಇರಪ್ಪ, ಸಿದ್ದು ಪುಜಾರಿ, ನಿಂಗಪ್ಪ ಹಚಡದ, ರವತಪ್ಪ ಬಿರಾದಾರ, ಕಾಂತಪ್ಪ, ರಮೇಶ, ಶಿವಯೋಗಿ, ಸಿದ್ದಯ್ಯಾ ಲೋಣಿ, ರೇವಣಸಿದ್ದ ಮಸಳಿ, ರಾಯಗೊಂಡ ಅಂಕಲಗಿ, ಸಂಜಿವ ಶಿವಪೂಜಿ, ನಿಂಗನಗೌಡ ಪಾಟೀಲ, ಬಸವರಾಜ ಲೋಣಿ, ಕಲ್ಲಪ್ಪ ಲೋಣಿ, ಶರಣಬಸಪ್ಪ ಕೆಂಬಾವಿ, ಮುದೀನಸಾಬ ಮುಲ್ಲಾ, ಶರಣಗೌಡ ಬಿರಾದಾರ, ನಿಂಗಪ್ಪ ಲೋಣಿ, ಆದಪ್ಪ ಯರಗುಟ್ಟಿ, ಶೀವಪ್ಪ ಹೊನಕಟ್ಟಿ, ಜಗದೀಶ ಚಿಮ್ಮಾಗೊಳ, ಶಿವಶರಣ ಬಂಜತ್ರಿ, ಭೀಮರಾಯ ಬಿರಾದಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಕಾಶ ರಾಠೋಡ ಇದ್ದರು.

ಸುದ್ದಿ ಓದಿ