ಉಡಿಕೇರಿ ಗ್ರಾಪಂ ಪಿಡಿಒ ಬಿ.ಬಿ. ಅಮ್ಮಿನಭಾವಿ ಅಮಾನತು
ಬೈಲಹೊಂಗಲ 28: ತಾಲೂಕಿನ ಉಡಿಕೇರಿ ಗ್ರಾಪಂ ಪಿಡಿಒ ಬಿ.ಬಿ. ಅಮ್ಮಿನಭಾವಿ ಇವರನ್ನು ಕರ್ತವ್ಯ ಚ್ಯುತಿ ಎಸಗಿದ ಪ್ರಕರಣದ ಅಡಿಯಲ್ಲಿ ಸೇವೆಯಿಂದ ಅಮಾನತುಗೊಳಿಸಿ, ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.
ಪಿಡಿಒ ಸರಕಾರದ ಸುತ್ತೋಲೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಗ್ರಾಪಂ ಸಭೆಯಲ್ಲಿ ಅನುಮೊದನೆ ಪಡೆಯದೆ ನಮೊನೆ 11ಬಿ ವಿತರಿಸುವ ದಾಖಲಾತಿಗಳನ್ನು ಪಡೆಯದೆ ನಕಲಿ ದಾಖಲಾತಿಗಳನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅಳವಡಿಸಿ, ನಿವೇಶನಗಳಿಗೆ ಇ-ಸ್ವತ್ತು ಉತಾರ ನೀಡಿದ್ದರು.
ಈ ಕುರಿತು ಗ್ರಾಪಂ ಅಧ್ಯಕ್ಷ ಮೂಗಬಸಪ್ಪ ಬನವನ್ನವರ, ಗ್ರಾಮದ ಮುಖಂಡ ಉಮೇಶ ಹಿತ್ತಲಮನಿ ಲಿಖಿತವಾಗಿ ದೂರು ನೀಡಿದ್ದರಿಂದ ತಾಪಂ ಇಒ ಸುಭಾಷ ಸಂಪಗಾಂವಿ ಅವರ ವರದಿಯನ್ವಯ ಇಲಾಖಾ ತನಿಖೆ ಬಾಕಿ ಇಟ್ಟು ಅಮಾನತು ಆದೇಶ ಹೊರಡಿಸಲಾಗಿದೆ.